ಕ್ರೈಂ ಸ್ಟೋರಿರಾಜ್ಯಸುದ್ದಿ

ಹೋಳಿ ಹಬ್ಬದಂದು ದುಷ್ಕರ್ಮಿಗಳ ಅಟ್ಟಹಾಸ..

ಗದಗ: ಹೋಳಿ ಹಬ್ಬದ ನಿಮಿತ್ಯ ಸಾರಿಗೆ ಬಸ್ ಗೆ ಮೊಟ್ಟೆ, ಸಗಣಿ, ಮಣ್ಣು, ಗೊಬ್ಬರ, ಕಲುಷಿತ ಬಣ್ಣ ಎರಚುವ ಮೂಲಕ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿರುವ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸುವರ್ಣಗಿರಿ ತಾಂಡಾ ಬಳಿ ನಡೆದಿದೆ. ಬಣ್ಣ ಬೀಳಬಾರದು ಎಂದು ಬಸ್ ಕಿಟಕಿ ಕ್ಲೋಸ್ ಮಾಡಿದ್ದ ವಿದ್ಯಾರ್ಥಿನಿಯರು ಈಗ ಅಸ್ವಸ್ತರಾಗಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ. ಈಗ ಅವರನ್ನು ಲಕ್ಷ್ಮೇಶ್ವರದ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಉಸಿರಾಟದ ತೊಂದರೆ, ಎದೆ ನೋವು ಅಂತಾ ಕಣ್ಣೀರು ಇಡುತ್ತಿದ್ದಾರೆ.ಆಸ್ಪತ್ರೆಗೆ ಪೊಲೀಸರು ಹಾಗೂ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದು, ವಿದ್ಯಾರ್ಥಿನಿಯರಿಂದ ಪೊಲೀಸರು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.ಈಗ ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ವಿದ್ಯಾರ್ಥಿಗಳ ಪೋಷಕರು ಒತ್ತಾಯಿಸಿದ್ದಾರೆ.

Comments (0)

Your email address will not be published. Required fields are marked *

Back to top button