ಕ್ರೈಂ ಸ್ಟೋರಿರಾಜ್ಯಸುದ್ದಿ

ಪೋಲಿಸ್ ಠಾಣೆಯಲ್ಲೆ ಮೊಬೈಲ್ ಎಗರಿಸಿದ ಖತರ್ನಾಕ್ ಕಳ್ಳ..!

ಸಾಮಾನ್ಯವಾಗಿ ಕಳ್ಳರಿಗೆ ಪೋಲಿಸರನ್ನು ಕಂಡರೆ ಭಯ ಆಗುತ್ತೆ. ಆದರೆ ಇಲ್ಲೊಬ್ಬ ಖತರ್ನಾಕ್ ಕಳ್ಳ ಪೋಲಿಸ್ ಅಧಿಕಾರಿಗಳ ಎದುರಿನಲ್ಲೇ ಮೊಬೈಲ್ ಎಗರಿಸಿರುವ ಘಟನೆ ಬೆಳಕಿಗೆ ಬಂದಿದೆ.

ಹೌದು, ಮುಲ್ಲಾ ಎಂಬ ವ್ಯಕ್ತಿ ಗದಗ ಪೋಲಸ್ ಠಾಣೆಯಲ್ಲೇ ಮೊಬೈಲ್ ಕಳ್ಳತನ ಮಾಡಿದ್ದಾನೆ. ಈತನ ಖತರ್ನಾಕ ಕಳ್ಳಾಟ ಸಿಸಿಟಿವಿ ಕ್ಯಾಮರಾದಲ್ಲಿ ಸೇರೆಯಾಗಿದೆ.

ಹೋಟೆಲ್ ಒಂದರಲ್ಲಿ ನಡೆದಿದ್ದ ಗಲಾಟೆ ವಿಷಯಕ್ಕೆ ಸಂಬಂಧಿಸಿದಂತೆ ದೂರು ನೀಡಲು ಈ ಮುಲ್ಲಾ ಸ್ಟೇಷನ್​ಗೆ ಹೋಗಿದ್ದ. ಠಾಣೆಯೊಳಗೆ ವಿಚಾರಣೆ ನಡೆಯುತ್ತಿದ್ದಾಗಲೇ ಈತ ಮೊಬೈಲ್ ಎಗರಿಸಿದ್ದಾನೆ. ಸದ್ಯ ಗದಗ ಶಹರ ಠಾಣೆ ಪೋಲಿಸರ ಈತನಿಗಾಗಿ ಬಲೆ ಬೀಸಿದ್ದಾರೆ.

Comments (0)

Your email address will not be published. Required fields are marked *

Back to top button