ಕ್ರೈಂ ಸ್ಟೋರಿರಾಜ್ಯಸುದ್ದಿ

ಕೊಪ್ಪಳ ವಿದೇಶಿ ಮಹಿಳೆ ಅತ್ಯಾಚಾರ ಕೇಸ್; ಹೋಂ ಸ್ಟೇ, ರೆಸಾರ್ಟ್​ಗಳ ಮೇಲೆ ಎಸ್​ಪಿ ರಾಮ್ ಅರಸಿದ್ದಿ ದಾಳಿ

ಕೊಪ್ಪಳ: ಜಿಲ್ಲೆಯ ಸಾಣಾಪುರ ಕೆರೆ ಬಳಿ ವಿದೇಶಿ ಮಹಿಳೆಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿತ್ತು.  ಈ ಕೇಸ್ ಬೆನ್ನಲ್ಲೇ ಎಚ್ಚೆತ್ತ ಕೊಪ್ಪಳ ಜಿಲ್ಲಾ ಪೋಲಿಸ್ ಇಲಾಖೆ ಆನೆಗೊಂದಿ ತಾನೂಕಿನ ಸುತ್ತಮುತ್ತಲಿರುವ ಹೋಂ ಸ್ಟೇ, ರೆಸಾರ್ಟ್​ಗಳ ಮೇಲೆ ದಾಳಿ ನಡೆಸಿದ್ದಾರೆ.

ಹೋಂ ಸ್ಟೇ, ರೆಸಾರ್ಟ್​ಗಳು ವಿದೇಶಿಗರ ಬಗ್ಗೆ ಯಾವುದೇ ಮಾಹಿತಿ ನೀಡದ ಆರೋಪ ಮತ್ತು ಅಕ್ರಮ ಚಟುವಟಿಕೆ ನಡೆಯುತ್ತಿರುವ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ಜಿಲ್ಲಾ ಎಸ್​ಪಿ ಡಾ. ರಾಮ್ ಅರಸಿದ್ಧಿ ನೇತೃತ್ವದಲ್ಲಿ ದಾಳಿ ನಡೆಸಿ, ಹಲವು ದಾಖಲೆಗಳನ್ನು ಪರಿಶೀಲನೆ ನಡೆಸಿದರು. ಅಲ್ಲದೇ ರೆಸಾರ್ಟ್ ಮಾಲಿಕರುಗಳಿಗೆ ಅಕ್ರಮ ದಂಧೆ ನಡೆಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

Comments (0)

Your email address will not be published. Required fields are marked *

Back to top button