ಕ್ರೈಂ ಸ್ಟೋರಿರಾಜ್ಯ

ಬೆಳಗಾವಿಯಲ್ಲಿ ಗೋವಾ ಮಾಜಿ ಶಾಸಕನ ಕೊಲೆ; ಆಟೋ ಚಾಲಕ ಅರೆಸ್ಟ್

ಬೆಳಗಾವಿ: ಗೋವಾದ ಮಾಜಿ ಶಾಸಕ ಲಾವೂ ಮಾಮಲೇದಾರ್ (69)  ಕ್ಷುಲ್ಲಕ ಕಾರಣದ ಹಿನ್ನೆಲೆಯಲ್ಲಿ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿಯ ಖಡೇಬಜಾರ್ ಮಾರುಕಟ್ಟೆಯ ಶ್ರೀನಿವಾಸ ಲಾಡ್ಜ್ ಬಳಿ ಘಟನೆ ನಡೆದಿದೆ. ಅಟೋ ಚಾಲಕ ಹಾಗೂ ಗೋವಾ ರಾಜ್ಯದ ಮಾಜಿ ಶಾಸಕ ಲಾವೊ ಮಾಮಲೇದಾರ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಮಾತಿನ ಚಕಮಕಿ ನಡೆದು ಕೊನೆಯಲ್ಲಿ ಅಟೋ ಚಾಲಕ ಗೋವಾ ಮಾಜಿ ಶಾಸಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಈ ಹಿನ್ನೆಲೆಯಲ್ಲಿ ಗೋವಾ ಮಾಜಿ ಶಾಸಕ ಕುಸಿದು ಬಿದ್ದು ಸ್ಥಳದಲ್ಲಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.

ಗೋವಾದ ಪೋಂಡಾ ಕ್ಷೇತ್ರದ ಶಾಸಕರಾಗಿದ್ದ ಲಾವೂ ಮಾಮಲೇದಾರ್. ಖಡೇಬಜಾರ್ ಬಳಿ ಮಾಜಿ ಶಾಸಕರ ಕಾರು ಆಟೋಗೆ ಟಚ್ ಆದ ಹಿನ್ನೆಲೆ ಜಗಳ ಶುರುವಾಗಿದೆ. ಬಳಿಕ ಆಟೋ ಚಾಲಕ ಲಾವೊ ಮಾಮಲೇದಾರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಮಾಜಿ ಶಾಸಕ ಲಾವೊ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಮೃತದೇಹವನ್ನ ಬೀಮ್ಸ್ ಗೆ ರವಾನಿಸಲಾಗಿದೆ. ಮಾರ್ಕೇಟ್ ಠಾಣೆ ಪೋಲಿಸರು ತಕ್ಷಣವೇ ಆರೋಪಿಗಳನ್ನುವಶಕ್ಕೆ ಪಡೆದಿದ್ದು ಕೇಸ್ ದಾಖಲಿಸಿದ್ದಾರೆ

ಮೃತ ದೇಹ ಬೆಳಗಾವಿ ಬಿಮ್ಸ್‌ಗೆ ರವಾನೆ ಮಾಡಲಾಗಿದೆ. ತಕ್ಷಣವೇ ಆರೋಪಿಯನ್ನು ವಶಕ್ಕೆ ಪಡೆದ ಮಾರ್ಕೆಟ್ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ..

Comments (0)

Your email address will not be published. Required fields are marked *

Back to top button