Top Newsದೇಶ/ವಿದೇಶರಾಜಕೀಯಸುದ್ದಿ

ನಾಳೆ ಕುಂಭಮೇಳದಲ್ಲಿ ಪ್ರಧಾನಿ ಮೋದಿ ಭಾಗಿ -ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ

ಉತ್ತರ ಪ್ರದೇಶ: ಪ್ರಧಾನಿ ನರೇಂದ್ರ ಮೋದಿ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಭಾಗವಹಿಸುತ್ತಿದ್ದು, ನಾಳೆ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲಿದ್ದಾರೆ.

ಧಾನಿ ಮೋದಿ ಬೆಳಗ್ಗೆ 10:05 ಕ್ಕೆ ಪ್ರಯಾಗ್‌ರಾಜ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ಬೆಳಗ್ಗೆ 10:10 ಕ್ಕೆ ಡಿಪಿಎಸ್ ಹೆಲಿಪ್ಯಾಡ್‌ಗೆ ಪ್ರಯಾಣಿಸಿ, ನಂತರ 10:45 ಕ್ಕೆ ಏರಿಯಲ್ ಘಾಟ್‌ಗೆ ತೆರಳಲಿದ್ದಾರೆ. 10:50 ಕ್ಕೆ ಏರಿಯಲ್ ಘಾಟ್‌ನಿಂದ ಮಹಾಕುಂಭಕ್ಕೆ ದೋಣಿಯಲ್ಲಿ ಪ್ರಯಾಣಿಸಲಿದ್ದಾರೆ. ಅಲ್ಲಿ ಅವರು ಬೆಳಗ್ಗೆ 11:00 ರಿಂದ 11:30 ರವರೆಗೆ ಸಂಗಮ್ ಘಾಟ್‌ನಲ್ಲಿ ಸ್ನಾನ ಮಾಡಲಿದ್ದಾರೆ.

ಬೆಳಗ್ಗೆ 11:45 ಕ್ಕೆ ಅವರು ದೋಣಿಯಲ್ಲಿ ಏರಿಯಲ್ ಘಾಟ್‌ಗೆ ಹಿಂತಿರುಗಿ ನಂತರ ಡಿಪಿಎಸ್ ಹೆಲಿಪ್ಯಾಡ್‌ಗೆ ವಾಪಸ್‌ ಆಗ್ತಾರೆ. ಅಲ್ಲಿಂದ ಅವರು ಪ್ರಯಾಗ್‌ರಾಜ್ ವಿಮಾನ ನಿಲ್ದಾಣಕ್ಕೆ ತೆರಳುತ್ತಾರೆ. ಮಧ್ಯಾಹ್ನ 12:30 ಕ್ಕೆ ವಾಯುಪಡೆಯ ವಿಮಾನದಲ್ಲಿ ಪ್ರಯಾಗ್‌ರಾಜ್‌ನಿಂದ ಹೊರಡಲಿದ್ದಾರೆ.

ಪ್ರಧಾನಿ ಮೋದಿ ಕುಂಭಮೇಳದಲ್ಲಿ ಭಾಗವಹಿಸಿರುವ ಸಾಧು-ಸಂತರ ಜತೆಗೆ ಕೆಲಕಾಲ ಮಾತುಕತೆ ನಡೆಸಲಿದ್ದಾರೆ. ಬಳಿಕ ಕುಂಭಮೇಳದಲ್ಲಿ ಭಾಗವಹಿಸುವ ಕೋಟ್ಯಂತರ ಮಂದಿಗೆ ಕಲ್ಪಿಸಿರುವ ಮೂಲಭೂತ ವ್ಯವಸ್ಥೆಗಳನ್ನು ಪರಿಶೀಲಿಸಲಿದ್ದಾರೆ ಎನ್ನಲಾಗಿದೆ.

ಇನ್ನು ಹೊಸದಿಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಹೊತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಕುಂಭಮೇಳದಲ್ಲಿ ಭಾಗಿಯಾಗಲಿದ್ದಾರೆ. ಇನ್ನು ಫೆ.5ರಂದು ಹಿಂದೂಗಳು ಮಾಘ ಅಷ್ಟಮಿ ಮತ್ತು ಭೀಷ್ಮ ಅಷ್ಟಮಿಯನ್ನು ಆಚರಿಸುತ್ತಾರೆ. ಈ ದಿನಗಳು ಧಾರ್ಮಿಕ ಹಾಗೂ ಐತಿಹಾಸಿಕ ಘಟನೆಗಳೊಂದಿಗೆ ಸಂಬಂಧ ಹೊಂದಿವೆ. ಮಾಘ ಅಷ್ಟಮಿ ಹಿಂದೂಗಳ ಪ್ರಕಾರ ಮಾಘ ಮಾಸದ ಎಂಟನೇ ದಿನದಂದು ಬರುತ್ತದೆ. ಈ ದಿನದಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನಕ್ಕಾಗಿ ಒಂದಾಗುತ್ತಾರೆ. ಅಂತೆಯೇ ಮಹಾಭಾರತದ ಭೀಷ್ಮನ ಸ್ಮರಣಾರ್ಥ ಭೀಷ್ಮ ಅಷ್ಟಮಿಯನ್ನು ಆಚರಿಸಲಾಗುತ್ತದೆ.

Comments (0)

Your email address will not be published. Required fields are marked *

Back to top button