Top Newsರಾಜ್ಯಸುದ್ದಿ

ಬಿಬಿಎಂಪಿ ಬಾಡಿಗೆಗೆ ಪಡೆಯಲಿದೆ ಕಸ ಗುಡಿಸುವ ದುಬಾರಿ ಯಂತ್ರ!

ಬೆಂಗಳೂರು: ದುಬಾರಿ ಬೆಲೆಯ 20 ಕಸ ಗುಡಿಸುವ ಯಂತ್ರಗಳನ್ನು ವಿದೇಶದಿಂದ ಬಾಡಿಗೆಗೆ ಪಡೆಯಲು ಬಿಬಿಎಂ ಮುಂದಾಗಿದೆ. ಅದಕ್ಕಾಗಿ ಮುಂದಿನ ಏಳು ವರ್ಷಕ್ಕೆ 764 ಕೋಟಿ ವ್ಯಯಿಸಲು ನಿರ್ಧರಿಸಿದೆ.

ಈ ಯಂತ್ರಗಳ ಮೂಲಕ ಕಸ ಗುಡಿಸಲು ಪ್ರತಿ ಕಿಲೋಮೀಟರ್ಗೆ ಅಂದಾಜು 1000 ಬಾಡಿಗೆ ದರ ನಿಗದಿಪಡಿಸಬಹುದು ಎಂದು ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವ ಸಲ್ಲಿಸಿರುವ ಆರ್​​ಐಟಿಇಎಸ್ ಲಿಮಿಟೆಡ್ ಸಂಸ್ಥೆ ತಿಳಿಸಿದೆ.

ರಸ್ತೆಗಳನ್ನು ದೂಳಿನಿಂದ ಮುಕ್ತಗೊಳಿಸಲು 2024-25ರ ಬಜೆಟ್​​ನ್ಲಿ ಬಿಬಿಎಂಪಿಯು ಬ್ರ್ಯಾಂಡ್ ಬೆಂಗಳೂರು ಕಾರ್ಯಕ್ರಮದ ಅಡಿಯಲ್ಲಿ ಮೆಕ್ಯಾನಿಕಲ್ ಸ್ವೀಪಿಂಗ್ ಯಂತ್ರಗಳ ಖರೀದಿಗೆ 30 ಕೋಟಿ ಮೀಸಲಿಟ್ಟಿತ್ತು. ಇದು ಮುಂದಿನ ಆರ್ಥಿಕ ವರ್ಷದಲ್ಲಿ ದುಪ್ಪಟ್ಟಾಗಲಿದೆ ಎಂದು ಬಿಬಿಎಂಪಿ ಅಂದಾಜಿಸಿದೆ. ಸ್ವೀಪಿಂಗ್ ಯಂತ್ರಕ್ಕಾಗಿ ಮೊದಲ ಎರಡು ವರ್ಷ 60 ಕೋಟಿ ವ್ಯಯವಾಗುತ್ತದೆ.ಆ ನಂತರದ ಐದು ವರ್ಷಗಳಲ್ಲಿ ಈ ವರ್ಷ ಮೂರು ಪಟ್ಟು ಹೆಚ್ಚಾಗಲಿದೆ ಎಂದು ಅಂದಾಜು ಮಾಡಲಾಗಿದೆ.

2017-18ನೇ ಸಾಲಿನಲ್ಲಿ ಖರೀದಿಸಿದ್ದ 26 ಯಂತ್ರಗಳು ಪ್ರಸ್ತುತ್ತ ಬಳಕೆಯಲ್ಲಿವೆ. ಹೊಸ ಯಂತ್ರಗಳನ್ನು ಖರೀದಿಸಲು ಪೌರಕಾರ್ಮಿಕರು ಪ್ರಸ್ತಾವ ಮುಂದಿಟ್ಟಿದ್ದರು. ಪ್ರತಿ ಯಂತ್ರಕ್ಕೆ 1.8 ಕೋಟಿ ನೀಡಬೇಕಿದ್ದು, ಪ್ರತಿ ತಿಂಗಳ ಅಂದಾಜು ವೆಚ್ಚ 6 ಲಕ್ಷ ವ್ಯಯವಾಗುತ್ತದೆ. ಈ ಯಂತ್ರಗಳು ಭಾರತದಲ್ಲಿಯೇ ತಯಾರಾಗುವಂಥವು. ವೆಚ್ಚವೂ ಕಡಿಮೆಯಾಗಿದೆ. ಆಮದು ಮಾಡಿಕೊಳ್ಳಲು ನಿರ್ಧರಿಸಿರುವ ಯಂತ್ರಗಳ ವೆಚ್ಚವು ಯಂತ್ರಗಳಿಗಿಂತ ಹಲವಾರು ಪಟ್ಟು ಅಧಿಕವಾಗಿದೆ. ಈ ಆರ್ಥಿಕ ಹೊರೆಯನ್ನು ನಿಭಾಯಿಸಲು ಬಿಬಿಎಂಪಿಗೆ ಕಷ್ಟವಾಗಬಹುದು ಎಂದು ಸಾರ್ವಜನಿಕರು ಪ್ರತಿಕ್ರಿಯಿಸಿದ್ದಾರೆ.

ರಸ್ತೆಗಳನ್ನು ಗುಡಿಸಲು 17 ಸಾವಿರ ಉದ್ಯೋಗಿಗಳಿದ್ದಾರೆ. ಅವರನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಅಲ್ಲದೇ ವಿದೇಶಿ ಯಂತ್ರಗಳು ಭಾರತದ ರಸ್ತೆಗಳಲ್ಲಿ ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಪ್ರಾಯೋಗಿಕವಾಗಿ ಪರೀಕ್ಷೆ ಮಾಡದೇ ಆಮದು ಮಾಡಿಕೊಳ್ಳಲು ಮುಂದಾಗುವ ಅಗತ್ಯ ಇರಲಿಲ್ಲ. ಇದು ಮೇಕ್ ಇನ್ ಇಂಡಿಯಾಕ್ಕೆ ವಿರುದ್ಧವಾದ ಕ್ರಮ ಎಂದು ತಜ್ಞರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Comments (0)

Your email address will not be published. Required fields are marked *

Back to top button