Top Newsರಾಜ್ಯಸುದ್ದಿ

ಬೆಂಗಳೂರು : ಫುಟ್​ಬಾತ್ ಮೇಲೆ ವಾಹನ ಚಲಾಯಿಸಿದ್ರೆ ಪರವಾನಗಿ ಅಮಾನತು.!

ಬೆಂಗಳೂರು: ಫುಟ್‌ಪಾತ್ ಮೇಲೆ ವಾಹನ ರೈಡಿಂಗ್ ಮಾಡಿದರೆ ಅಂತವರ ಡ್ರೈವಿಂಗ್ ಲೈಸೆನ್ಸ್ (ಡಿಎಲ್) ಅಮಾನತು ಮಾಡುಲಾಗುತ್ತದೆ ಎಂದು ಟ್ರಾಫಿಕ್ ಪೊಲೀಸರು ನಿರ್ಧಾರನ್ನು ಕೈಗೊಂಡಿದ್ದಾರೆ.

ಫುಟ್‌ಪಾತ್ ಮೇಲೆ ಬೈಕ್, ಕಾರು ಓಡಿಸುವ ಸವಾರರಿಗೆ ಸಂಚಾರ ವಿಭಾಗದ ಪೊಲೀಸರು ಕಣ್ಣು ಇಟ್ಟಿದ್ದು ಎಚ್ಚರಿಕೆಯು ಸಹಾ ನೀಡಿದ್ದಾರೆ. ಪಾದಾಚಾರಿ ರಸ್ತೆಯಲ್ಲಿ ವಾಹನ ಚಲಾಯಿಸಿದರೆ ಡಿಎಲ್ ಅಮಾನತು ಮಾಡುವುದಾಗಿ ಎಚ್ಚರಿಸಿದ್ದಾರೆ.

ಇದರ ಜೊತೆಗೆ ವಾಹನ ಸವಾರರ ವಿರುದ್ಧ ಕೇಸ್ ದಾಖಲಿಸಿ ಸೂಕ್ತ ದಂಡ ವಿಧಿಸಲಿದ್ದಾರೆ. ಫುಟ್‌ಪಾತ್ ರೈಡಿಂಗ್ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರ ನಿರ್ಧಾರಿಸಿದ್ದಾರೆ. ಫುಟ್‌ಪಾತ್ ಇರೋದು ಪಾದಚಾರಿಗಳಿಗೆ ಮಾತ್ರ. ಅಲ್ಲಿ ವಾಹನ ಚಲಾಯಿಸುವಂತಿಲ್ಲ ಎಂದು ಸೂಚಿಸಿದ್ದಾರೆ.

ಪಾದಚಾರಿಗಳು ಹೊರತುಪಡಿಸಿ ಬೇರೆ ಯಾರೇ ಬಳಸಿದರೂ ಅವರ ವಿರುದ್ಧ ಸೂಕ್ತ ಕ್ರಮ ಆಗಲಿದೆ ಎಂದ್ರು. ಪಾದಚಾರಿಗಳ ಸುಗಮ ಓಡಾಟಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪೊಲೀಸರು ಕಠಿಣ ನಿಯಮ ರೂಪಿಸಿದ್ದಾರೆ.

ಇತ್ತೀಚೆಗೆ ಟ್ರಾಫಿಕ್‌ನಿಂದ ತಪ್ಪಿಸಿಕೊಳ್ಳಲು ನಿಯಮ ಉಲ್ಲಂಘಿಸಿ ಫುಟ್‌ಪಾತ್ ಮೇಲೆ ವಾಹನ ಚಲಾಯಿಸಿಕೊಂಡು ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಪಾದಚಾರಿಗಳಿಗೆ ಓಡಾಟಕ್ಕೆ ಕಿರಿಕಿರಿಯಾಗುತ್ತಿದೆ. ಫುಟ್‌ಪಾತ್‌ನಲ್ಲಿ ಬೈಕ್ ಅಷ್ಟೇ ಅಲ್ಲ, ಕೆಲವರು ಕಾರುಗಳನ್ನೂ ಚಲಾಯಿಸಿರುವುದು ಕಂಡುಬಂದಿದೆ. ಇದೆಲ್ಲವನ್ನು ತಪ್ಪಿಸಲು ಕಟ್ಟುನಿಟ್ಟಿನ ಕ್ರಮಕ್ಕೆ ಟ್ರಾಫಿಕ್ ಪೊಲೀಸರು ಮುಂದಾಗಿದ್ದಾರೆ.

Comments (0)

Your email address will not be published. Required fields are marked *

Back to top button