Top Newsರಾಜ್ಯಸುದ್ದಿ

ಬೀದರ್: ಕಾರು- ಗೂಡ್ಸ್ ವಾಹನದ ಮುಖಾಮುಖಿ ಢಿಕ್ಕಿ, ಇಬ್ಬರು ಸಾವು

ಬೀದರ್: ಬೀದರ್ : ಕಾರು ಮತ್ತು ಗೂಡ್ಸ್ ವಾಹನದ ನಡುವೆ ಢಿಕ್ಕಿ ಸಂಭವಿಸಿ ಇಬ್ಬರು ಮೃತಪಟ್ಟ ಘಟನೆ ಹುಮನಾಬಾದ್ ತಾಲ್ಲೂಕಿನ ಹಳ್ಳಿಖೆಡ್ ಬಿ ಗ್ರಾಮದ ಹತ್ತಿರ ನಡೆದಿದೆ.

ಮೃತರನ್ನು ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ ನಾಗೂರು ಗ್ರಾಮದ ನಿವಾಸಿ ಜಗನ್ನಾಥ (35) ಹಾಗೂ ಬೀದರ್ ನ ಎಂಡಿ ಇಸ್ಮಾಯಿಲ್ (45) ಎಂದು ಗುರುತಿಸಲಾಗಿದೆ.

ಹಳ್ಳಿಖೇಡ್ ನ ಬಿಎಸ್ ಎಸ್ ಕೆ ಸಕ್ಕರೆ ಕಾರ್ಖಾನೆ ಹತ್ತಿರುವ ಇರುವ ಸೇತುವೆ ಮೇಲೆ ವಾಹನಗಳು ಪರಸ್ಪರ ಢಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

Comments (0)

Your email address will not be published. Required fields are marked *

Back to top button