Top Newsಮನರಂಜನೆರಾಜ್ಯಸುದ್ದಿ

BBK 11: ಟ್ರೋಫಿ ಗೆದ್ದ ಖುಷಿಯಲ್ಲಿ ಸುದೀಪ್‌ ಕಾಲಿಗೆ ಬಿದ್ದ ಹಳ್ಳಿ ಹೈದ ಹನುಮಂತ

ಬಿಗ್‌ ಬಾಸ್‌ ಕನ್ನಡ ಸೀಸನ್ 11ರ ವಿನ್ನರ್‌ ಆಗಿ ಹನುಮಂತ ಹೊರಹೊಮ್ಮಿದ್ದಾರೆ. ಟ್ರೋಫಿ ಗೆದ್ದ ಖುಷಿಯಲ್ಲಿ ಕಿಚ್ಚ ಸುದೀಪ್‌ ಅವರ ಕಾಲಿಗೆ ಬಿದ್ದು ಹಳ್ಳಿ ಹೈದ ಆಶೀರ್ವಾದ ಪಡೆದಿದ್ದಾರೆ.

ಬಿಗ್‌ ಬಾಸ್‌ ಫಿನಾಲೆ ಕೊನೆ ಹಂತ ರೋಚಕತೆಯಿಂದ ಕೂಡಿತ್ತು. ಯಾರು ವಿನ್ನರ್‌ ಆಗ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಸುದೀಪ್‌ ತಮ್ಮ ಬಲಭಾಗಕ್ಕೆ ಹನುಮಂತ ಹಾಗೂ ಎಡ ಭಾಗಕ್ಕೆ ತ್ರಿವಿಕ್ರಮ್‌ ನಿಂತಿದ್ದರು.

ಕೊನೆಗೂ ಸುದೀಪ್‌ ಅವರು ಹನುಮಂತನ ಕೈ ಎತ್ತುವ ಮೂಲಕ ವಿನ್ನರ್‌ ಎಂದು ಘೋಷಿಸಿದರು. ಗೆದ್ದ ಖುಷಿಯಲ್ಲಿ ಹನುಮಂತ, ಸುದೀಪ್‌ ಕಾಲಿಗೆ ಬಿದ್ದು ನಮಸ್ಕರಿಸಿದರು. ಇತ್ತ ಹನುಮಂತನ ಫ್ಯಾನ್ಸ್‌ ಸಂಭ್ರಮಾಚರಣೆ ಮಾಡಿದರು.

ಹನುಮಂತ ಒಂದು ಲುಂಗಿ ಹಾಗೂ ಶರ್ಟ್ ಆಗಿ ದೊಡ್ಮನೆಗೆ ಎಂಟ್ರಿ ಪಡೆದವವರು. ಅದೂ ವೈಲ್ಡ್ ಕಾರ್ಡ್ ಮೂಲಕ. ಈಗ ವೈಲ್ಡ್ ಕಾರ್ಡ್ ಸ್ಪರ್ಧಿ ದೊಡ್ಮನೆಯಲ್ಲಿ ಗೆದ್ದಿದ್ದು ಇದೇ ಮೊದಲು ಅನ್ನೋದು ವಿಶೇಷ. ಹನುಮಂತನ ಆಟದ ಬಗ್ಗೆ ಸುದೀಪ್ ಅವರು ಇತರ ಸ್ಪರ್ಧಿಗಳಿಗೆ ಮೊದಲೇ ಎಚ್ಚರಿಕೆ ನೀಡಿದ್ದರು. ಆದರೆ, ಯಾರೊಬ್ಬರೂ ಈ ಎಚ್ಚರಿಕೆಯನ್ನು ಗಂಭೀರವಾಗಿ ಸ್ವೀಕರಿಸಿರಲಿಲ್ಲ

ಕನ್ನಡದ ಬಿಗ್ ಬಾಸ್ ಇತಿಹಾಸದಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿ ವಿನ್ನರ್ ಆಗಿದ್ದು ಇದೇ ಮೊದಲು. ಈಗ ಹನುಮಂತ 50 ಲಕ್ಷದ ಒಡೆಯನಾಗಿದ್ದಾರೆ. ಜವಾರಿ ಹೈದ ಭಾರೀ ವೋಟ್ ಗಳಿಸಿ ದಾಖಲೆ ಸೃಷ್ಟಿಸಿದ್ದಾರೆ.

Comments (0)

Your email address will not be published. Required fields are marked *

Back to top button