#Exclusive NewsTop Newsಜಿಲ್ಲೆಸುದ್ದಿ

ಕೊಪ್ಪಳ ಜಾತ್ರೆ : 2 ನೇಯ ದಿನ‌ದ ದಾಸೋಹದಲ್ಲಿ ಮಿರ್ಚಿಯ ಘಮಲು..!

  • ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಯ ಹಿನ್ನೆಲೆ
  • 2 ನೇಯ ದಿನ‌ದ ದಾಸೋಹದಲ್ಲಿ ಮಿರ್ಚಿಯ ಘಮಲು..!
  • ಎರಡನೇ ದಿನದ ದಾಸೋಹದಲ್ಲಿ ಇರಲಿದೆ ಬಜ್ಜಿ..!
  • ದಾಸೋಹಕ್ಕೆ 10 ಲಕ್ಷಕ್ಕೂ ಅಧಿಕ‌ ಮಿರ್ಚಿ ತಯಾರು

 

ಕೊಪ್ಪಳ : ಗವಿಮಠದ ಶ್ರೀ ಗವಿಸಿದ್ಧೇಶ್ವರ ಜಾತ್ರೆ ವಿಭಿನ್ನ ವಿಶಿಷ್ಟವಾಗಿದೆ. ಕೇವಲ ಭಕ್ತಿ ಭಾವನೆ, ರಥೋತ್ಸವಕ್ಕೆ ಅಷ್ಟೇ ಗವಿಸಿದ್ಧೇಶ್ವರ ಜಾತ್ರೆ ಸೀಮಿತವಾಗಿಲ್ಲ, ಇಲ್ಲಿ ಮಹಾದಾಸೋಹವು ಅತ್ಯಂತ ವಿಶಿಷ್ಟವಾಗಿ ಪ್ರತಿವರ್ಷವೂ ಜರುಗುತ್ತದೆ. ಅದು ಕೇವಲ ಪ್ರಸಾದ ಅಷ್ಟೇ ಅಲ್ಲ, ಭಕ್ತರಿಗೆ ಪ್ರಸಾದದಲ್ಲಿ ವಿಭಿನ್ನ ಆಹಾರ ಪದಾರ್ಥ ಸವಿಯುವ ಅವಕಾಶ ಈ ಜಾತ್ರೆಯಲ್ಲಿ ಸಿಗುತ್ತೆ ಅನ್ನೋದು ವಿಶೇಷ.

ಜಾತ್ರೆಯ ಎರಡನೇ ದಿನ ಉತ್ತರ ಕರ್ನಾಟಕದ ಪ್ರಸಿದ್ಧ ತಿನಿಸುಗಳಲ್ಲಿ ಒಂದಾದ ಮಿರ್ಚಿ ತಯಾರಿಸಲು 25 ಕ್ವಿಂಟಲ್ ಕಡಲೆ ಬೇಳೆ ಹಿಟ್ಟು, 22 ಕ್ವಿಂ.ಹಸಿ ಮೆಣಸಿನ ಕಾಯಿ, 15 ಬ್ಯಾರಲ್ ಎಣ್ಣೆ,50 ಕೆ.ಜಿ.ಅಜವಾನ, 50ಕೆ.ಜಿ. ಸೋಡಾಪುಡಿ, 100ಕೆ.ಜಿ. ಉಪ್ಪು, 60 ಸಿಲಿಂಡರ್ ಹಾಗೂ ಮಿರ್ಚಿ ಹಾಕುತ್ತಿರುವ 400 ಕ್ಕೂ ಹೆಚ್ಚು ಬಾಣಸಿಗರು..

 

Comments (0)

Your email address will not be published. Required fields are marked *

Back to top button