#Exclusive NewsTop Newsಜಿಲ್ಲೆಸುದ್ದಿ

ರಾಜ್ಯ ಗುತ್ತಿಗೆದಾರ ಪರ ನಾವಿದ್ದೇವೆ ; ಶಾಸಕ‌ ಮಹೇಶ ಟೆಂಗಿನಕಾಯಿ‌

  • ಕಾಲ ಚಕ್ರ ಒಂದೇ ತರ ಇರುವುದಿಲ್ಲ‌…ಚಕ್ರ ತಿರುಗುತ್ತೆ….
  • ರಾಜ್ಯ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ..!
  • ಹುಬ್ಬಳ್ಳಿಯಲ್ಲಿ BJP ಶಾಸಕ‌ ಮಹೇಶ ಟೆಂಗಿನಕಾಯಿ‌ ಕಿಡಿ

 

ಹುಬ್ಬಳ್ಳಿ ; ನಮ್ಮ ಮೇಲೆ 40% ಆರೋಪ ಹೇಳಿದವರ ಮೇಲೆಯೇ ಗುತ್ತಿಗೆದಾರರು ಕಮಿಷನ್ ಆರೋಪ ಮಾಡುತ್ತಿದ್ದಾರೆ.ಗುತ್ತಿಗೆದಾರರು ಹೋರಾಟ ಮಾಡಿ ಬಿಲ್‌ ಬಿಡುಗಡೆ ಮಾಡಿಸಿಕೊಳ್ಳೂವ ಸ್ಥಿತಿ ಬಂದಿದೆ ಎಂದು ಹುಬ್ಬಳ್ಳಿಯಲ್ಲಿ ಬಿಜೆಪಿ‌ ಶಾಸಕ‌ ಮಹೇಶ ಟೆಂಗಿನಕಾಯಿ‌ ಕಿಡಿಕಾರಿದ್ದಾರೆ.

https://youtu.be/B6-8P45MrpQ

ಬಿಜೆಪಿ‌ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಗುತ್ತಿಗೆದಾರರನ್ನು ಬಳಸಿಕೊಂಡ ಹಲವು ಆರೋಪಗಳನ್ನು ಮಾಡಿತ್ತು.ಕಾಲ ಚಕ್ರ ಒಂದೇ ತರ ಇರುವುದಿಲ್ಲ‌ ಚಕ್ರ ತಿರುಗೇ ತಿರುಗುತ್ತದೆ ಎಂದು ಹೇಳಿದರು. ಈ ಹಿಂದೆ ಗುತ್ತಿಗೆದಾರರನ್ನು ಬಳಸಿ ಬಿಜೆಪಿ ಮೇಲೆ ಕಮಿಷನ್ ಆರೋಪ ಕಾಂಗ್ರೆಸ್ ನಾಯಕರು ಮಾಡಿದ್ದರು. ರಾಜ್ಯ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ ಅವರ ಪರ ನಾವು ಅವರ ಬೆನ್ನಿಗೆ ನಿಲ್ಲುತ್ತೇವೆ ಎಂದು ಮಹೇಶ ಟೆಂಗಿನಕಾಯಿ ಹೇಳಿದರು.

 

Comments (0)

Your email address will not be published. Required fields are marked *

Back to top button