#Exclusive NewsTop Newsಜಿಲ್ಲೆಸುದ್ದಿ

ದುರ್ಗಾಶ್ರೀ .ಎನ್​ , ತಹಶೀಲ್ದಾರ್ ವಿಭಾ ವಿದ್ಯಾ ರಾಥೋಡ್ ವಿರುದ್ಧ ದೂರು ; ಸರ್ಕಾರಿ ಭೂಮಿ ಬಿಲ್ಡರ್​ಗಳಿಗೆ ಧಾರೆ

ದೊಡ್ಡ ಬಳ್ಳಾಪುರ ತಾಲೂಕು ದೊಡ್ಡ ಬೆಲಮಂಗಲ ಹೋಬಳಿ ಹುಲಿಕುಂಟೆ ಗ್ರಾಮದ ಹಲವು ಸರ್ವೇ ನಂ.ಗಳಲ್ಲಿ ಅಕ್ರಮವಾಗಿ ಸರ್ಕಾರಿ ಭೂಮಿಗಳನ್ನ ಪರಭಾರೆ ಮಾಡಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ದೂರಿದ್ದಾರೆ.

ಕುರಿತು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಶಿವಶಂಕರ್ ಅವರಿಗೆ ದೂರು ನೀಡಿರುವ ಅವರು AC ಹಾಗು ತಹಶೀಲ್ದಾರ್ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅನ್ವಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಹುಲಿಕುಂಟೆ ಗ್ರಾಮದ ಸರ್ವೇ.ನಂ ಗಳಾದ.
158//3, 151//2A, 156//2,156//4,156//5, 156//3,156//1,158//1,158//2,158//3,
280//4, 273//1, 273//2, 300//, 279//3, 279//4, 250//1, 272//1, 272//2, 281//1,
281/2, 282//3, 282//4, 282//5, 280//1, 280/*4 ,279//4, 279//3, 300, 280//3, 274,
306, 156//5, 156//4, 156//3, 152//2, 156//1 250//1, 281//2, 281//1,

ಈ ಮೇಲ್ಕಂಡ ಸರ್ವೇ ನಂಬರ್​ಗಳಲ್ಲಿ ಪರಭಾರೆ ಆಗಿದೆ ಎಂದು ದಿನೇಶ್ ಕಲ್ಲಹಳ್ಳಿ ಆಪಾದಿಸಿದ್ದಾರೆ. ಈ ಸರ್ವೇ ನಂಬರ್​ಗಳ ಹತ್ತಾರು ಎಕರೆ ಸರ್ಕಾರಿ ಭೂಮಿಯನ್ನ ಈ ಅಧಿಕಾರಿಗಳು ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಾರೆ.ಹತ್ತಾರು ಕೋಟಿ ಲಂಚದ ವ್ಯವಹಾರ ನಡೆದಿದೆ, ಖಾಸಗಿ ವ್ಯಕ್ತಿಗಳು ಅಗ್ರಿಮೆಂಟ್ ಮಾಡಿಕೊಂಡು ಅಧಿಕಾರಿಗಳಿಗೆ ಲಂಚ ಕೊಟ್ಟು ಭೂಮಿ ಕಬಳಿಸಿದ್ದಾರೆ . ಆಕಾರ್ ಬಂದ್ ಪ್ರಕಾರ ಈ ಜಮೀನು ಸರ್ಕಾರಿ ಗೋಮಾಳ ವಾಗಿರುತ್ತದೆ. ಈ ಪೈಕಿ ಕೆಲವು ಜಮೀನು ರೈತರಿಗೆ ಮಂಜೂರು ಸಹ ಆಗಿರುತ್ತದೆ.
ಸರ್ವೇ ಇಲಾಖೆಯಲ್ಲಿ ದಾಖಲೆಗಳು ಇಲ್ಲದಿದ್ದರೂ,ನಕಲಿ ದಾಖಲೆ ಸೃಷ್ಟಿಸಿ ಜಮೀನನ್ನು ಮಂಜೂರು ಮಾಡಿದ್ದಾರೆ. ಹಾಗಾಗಿ ಸದರಿ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಿ ಇವರಿಬ್ಬರನ್ನು ಕೂಡಲೇ ಸಸ್ಪೆಂಡ್ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.

ಜೊತೆಗೆ ಅವ್ಯವಹಾರದಲ್ಲಿ ಭಾಗಿಯಾಗಿ ಸುಳ್ಳು ದಾಖಲೆಗಳನ್ನು ಮಾಹಿತಿಯನ್ನು ಸಲ್ಲಿಸಿ ನಿಯಮಬಾಹಿರವಾಗಿ ಸರ್ಕಾರದ ಜಮೀನು ದುರಸ್ತಿ ಪೋಡಿ ಮಾಡಿ ವ್ಯಾಪಕ ಭ್ರಷ್ಟಾಚಾರ ನಡೆಸಿರುವ ಅಧಿಕಾರಿಗಳಾದ ದೊಡ್ಡಬಳ್ಳಾಪುರ ತಾಲೂಕು ಉಪ ವಿಭಾಗಾಧಿಕಾರಿ ಶ್ರೀಮತಿ ದುರ್ಗಾಶ್ರೀ ಎನ್.ಹಾಗು ತಹಶೀಲ್ದಾರ್ ಶ್ರೀಮತಿ ವಿಭಾ ವಿದ್ಯಾ ರಾಥೋಡ್ ಹಾಗು ಇತರ ಅಧಿಕಾರಿಗಳ ವಿರುದ್ಧ ಕರ್ತವ್ಯಲೋಪ ಹಾಗೂ ಕಚೇರಿ ಮತ್ತು ಅಧಿಕಾರ ದುರುಪಯೋಗ,ಅವ್ಯವಹಾರ,ವಂಚನೆ,ಸ್ವಜನಪಕ್ಷಪಾತ,ಭ್ರಷ್ಟಾಚಾರ,ಕಾನೂನು ಬಾಹಿರವಾಗಿ ಪಹಣಿಗಳನ್ನು ಅಕ್ರಮವಾಗಿ ತಿದ್ದುಪಡಿ ಮಾಡಿದ ಪ್ರಕರಣಕ್ಕೆ ಸಂಭಂದಿಸಿದಂತೆ ಸದರಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

Comments (0)

Your email address will not be published. Required fields are marked *

Back to top button