ಭಾರತೀಯ ಪುರುಷರಿಗೆ ಮದುವೆಯಾಗಲು ‘ವರ್ಜಿನ್ ಹುಡುಗಿಯರು’ ಸಿಗುವುದಿಲ್ಲ ಎಂದು ಹೇಳಿದ ಟ್ವಿಟರ್ ಬಳಕೆದಾರರೊಬ್ಬರನ್ನು ಗಾಯಕಿ ಚಿನ್ಮಯಿ ಶ್ರೀಪಾದ ತರಾಟೆಗೆ ತೆಗೆದುಕೊಂಡಿದ್ದಾರೆ. ವರ್ಜಿನ್ ಎನ್ನುವುದು ಮಹಿಳೆಯರಿಗೆ ಮಾತ್ರ ಅನ್ವಯವಾಗುತ್ತದೆಯೇ? ಪುರುಷರಿಗೂ ಇದು ಅನ್ವಯವಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಚಿನ್ಮಯಿ ಶ್ರೀಪಾದ ಅವರು ಅದ್ಬುತ ಗಾಯಕಿ ಆಗಿದ್ದಾರೆ. ತಮ್ಮ ಹಾಡುಗಳಿಗಾಗಿ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಆದ್ರೆ ಕೆಲವು ವರ್ಷಗಳಿಂದ ಆಕೆಯ ಹೆಸರು ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗುತ್ತಿದೆ. ಸಮಾಜದಲ್ಲಿ ಆಗುತ್ತಿರುವ ಹಲವು ಸಮಸ್ಯೆಗಳಿಗೆ ತನ್ನದೇ ಶೈಲಿಯಲ್ಲಿ ಪ್ರತಿಕ್ರಿಯಿಸೋ ಚಿನ್ಮಯಿ ಶ್ರೀಪಾದ ಅವರ ಕಮೆಂಟ್ ಗಳು ತೀವ್ರ ಟೀಕೆಗೆ ಕಾರಣವಾಗಿದ್ದವು.
ಹೊಸ ವರ್ಷದ ಸಂದರ್ಭದಲ್ಲಿ ಚಿನ್ಮಯಿ ತಮ್ಮ ಎಕ್ಸ್ ಖಾತೆಯಲ್ಲಿ ಮಾಡಿದ ಕಮೆಂಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. Blinkit ಡೆಲಿವರಿ ಆ್ಯಪ್ ನ CEO ಅವರು ತಮ್ಮ X ಖಾತೆಯಲ್ಲಿ ಡಿಸೆಂಬರ್ 31 ರಂದು ಫುಡ್ ಹಾಗೂ ವಿವಿಧ ವಸ್ತುಗಳ ವಿತರಣೆಯ ಬಗ್ಗೆ ಪೋಸ್ಟ್ ಶೇರ್ ಮಾಡಿದ್ರು. ಆ ಒಂದೇ ದಿನ 20 ಸಾವಿರ ಕಾಂಡೋಮ್ ಮಾರಾಟವಾಗಿದೆ. ಇದಕ್ಕೆ ನೆಟ್ಟಿಗರು ಕೂಡ ಕಾಮಿಡಿ ಆಗಿಯೇ ಪ್ರತಿಕ್ರಿಯಿಸಿದ್ರು. ಯಾವ ಫ್ಲೇವರ್ ಗಳು ಹೆಚ್ಚು ಮಾರಾಟವಾಗಿವೆ ಎಂದು ಕೇಳುವ ಮೂಲಕ ಚಾಟ್ ಶುರು ಮಾಡಿದ್ರು. ಇದಕ್ಕೆ ಉತ್ತರಿಸಿದ ಸಿಇಒ ಚಾಕೊಲೇಟ್ ಮತ್ತು ಸ್ಟ್ರಾಬೆರಿ ಫ್ಲೇವರ್‌ಗಳು ಹೆಚ್ಚು ಮಾರಾಟವಾಗಿವೆ ಎಂದು ಮತ್ತೊಂದು ಪೋಸ್ಟ್ ಮಾಡಿದ್ರು.
Then men shouldn’t have premarital sex with women.
Unless said men are having sex with goats, dogs and reptiles. pic.twitter.com/sM3YJ3Myvg— Chinmayi Sripaada (@Chinmayi) January 1, 2025
ಈಗ ಡಿಲೀಟ್ ಮಾಡಿರುವ ಟ್ವೀಟ್‌ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿರುವ ಚಿನ್ಮಯಿ, ‘ಹಾಗಾದರೆ ಪುರುಷರು ಮಹಿಳೆಯರೊಂದಿಗೆ ವಿವಾಹಪೂರ್ವ ಸಂಭೋಗವನ್ನು ಹೊಂದಿರಬಾರದು’. ಯಾರಾದರೂ ವಿವಾಹಪೂರ್ವ ಲೈಂಗಿಕತೆಯ ವಿರುದ್ಧ ಕಠಿಣ ದೃಷ್ಟಿಕೋನಗಳನ್ನು ಹೊಂದಿದ್ದರೆ, ಅವರು ಆ ಮಾನದಂಡಗಳನ್ನು ಸಾರ್ವತ್ರಿಕವಾಗಿ ಅನ್ವಯಿಸಬೇಕು ಎಂದಿದ್ದಾರೆ.