#Exclusive NewsTop Newsಜಿಲ್ಲೆರಾಜಕೀಯಸುದ್ದಿ

ನನ್ನ ತಂದೆಯೂ ಜನಸಂಘದವರು ; ಪ್ರತಾಪ್ ಸಿಂಹ

ಮೈಸೂರು :ಕಾಂಗ್ರೆಸ್​​ಗೆ ಹೋಗಬೇಕು ಎಂದಿದ್ದರೆ ಚುನಾವಣೆ ಸಂದರ್ಭದಲ್ಲಿಯೇ ಹೋಗಬಹುದಿತ್ತಲ್ಲವೇ? ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಕಾಂಗ್ರೆಸ್ ಸೇರುವ ಬಗ್ಗೆ ಒಲವು ಹೊಂದಿದ್ದಾರೆ ಎಂಬ ವದಂತಿಗಳ ಬಗ್ಗೆ ಖುದ್ದು ಅವರೇ ಪ್ರತಿಕ್ರಿಯೆ ನೀಡಿದ್ದಾರೆ. ಮೈಸೂರಿನಲ್ಲಿ ಸ್ಪಷ್ಟನೆ ನೀಡಿದ ಅವರು, ಈ ಈತರ ಊಹಾಪೋಹಗಳನ್ನು ಮಾಡುವವರಿಗೆ ನಾನು ಒಂದು ಮಾತು ಹೇಳುತ್ತೇನೆ, ಪ್ರತಾಪ್ ಸಿಂಹ ಕಾಂಗ್ರೆಸ್ಸಿಗೆ ಹೋಗಬೇಕಾದ ಅನಿವಾರ್ಯತೆ ಇಲ್ಲ ಎಂದರು.

ನನ್ನ ತಂದೆಯೂ ಜನಸಂಘದವರು, ಪ್ರತಾಪ್ ಸಿಂಹ ಕೂಡ ಎಂದಿಗೂ ಬಿಜೆಪಿಯಲ್ಲಿಯೇ ಇರುತ್ತಾನೆ. ನಮ್ಮದು ಸೈದ್ಧಾಂತಿಕ ಬದ್ಧತೆ ಇರುವ ಪಕ್ಷ. ಕಾಂಗ್ರೆಸ್​​ಗೆ ಹೋಗಬೇಕು ಎಂದಿದ್ದರೆ ಚುನಾವಣೆ ಸಂದರ್ಭದಲ್ಲಿಯೇ ಹೋಗಬಹುದಿತ್ತಲ್ಲವೇ? ಆ ಪಕ್ಷದಿಂದ ಯಾರ್ಯಾರು ನನಗೆ ಫೋನ್ ಮಾಡಿ ನನಗೆ ಟಿಕೆಟ್ ಆಫರ್ ಮಾಡಿದ್ದರು ಅವರ ಬಳಿ ಕೇಳಿ ನೋಡಿ. ಹೋಗುವುದಿದ್ದರೆ ಆಗಲೇ ಹೋಗುತ್ತಿದ್ದೆ ಎಂದರು.

Comments (0)

Your email address will not be published. Required fields are marked *

Back to top button