#Exclusive NewsTop Newsದೇಶ/ವಿದೇಶಸುದ್ದಿ

ಈಡೇರದೇ ಉಳಿದ ಮನಮೋಹನ್​ ಸಿಂಗ್​ರ ಕನಸೇನು?

ಭಾರತದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ನಿಧನರಾಗಿದ್ದಾರೆ. ಗುರುವಾರ ಸಂಜೆ ಹಠಾತ್ ಪ್ರಜ್ಞೆ ತಪ್ಪಿ ಬಿದ್ದಿದ್ದರು, ಅವರನ್ನು ಕೂಡಲೇ ಏಮ್ಸ್​ ಆಸ್ಪತ್ರೆಗೆ ದಾಖಲಿಸಲಾಯಿತು, ಕೊನೆಗೂ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅವರ ಸಾವಿನ ಸುದ್ದಿ ಕೇಳುತ್ತಿದ್ದಂತೆ ಅವರ ನೆರವೇರದ ಆಸೆಯ ಬಗ್ಗೆಯೂ ಚರ್ಚೆ ನಡೆಯಿತು. ಆದರೆ ತಮ್ಮ ಈಡೇರದ ಕನಸಿನ ಬಗ್ಗೆ ಜೀವನದುದ್ದಕ್ಕೂ ವಿಷಾದ ವ್ಯಕ್ತಪಡಿಸಿದ್ದರು.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಸೆಪ್ಟೆಂಬರ್ 26, 1932ರಲ್ಲಿ ಜನಿಸಿದ ಮನಮೋಹನ್ ಸಿಂಗ್ ಅವರ ಕುಟುಂಬ ವಿಭಜನೆಯ ಬಳಿಕ ಭಾರತಕ್ಕೆ ಬಂದಿತು. ಆದರೆ ತಾವು ಬೆಳೆದ ಸ್ಥಳವನ್ನು ಅವರಿಗೆ ಎಂದೂ ಮರೆಯಲು ಸಾಧ್ಯವಾಗಲಿಲ್ಲ. ಕಾಂಗ್ರೆಸ್ ನಾಯಕ ರಾಜೀವ್ ಶುಕ್ಲಾ ಅವರು ತಮ್ಮ ಸಂದರ್ಶನವೊಂದರಲ್ಲಿ ಮನಮೋಹನ್ ಸಿಂಗ್​ ಅವರ ಕನಸುಗಳ ಬಗ್ಗೆ ಪ್ರಸ್ತಾಪಿಸಿದ್ದರು.

ಮನಮೋಹನ್​ ಸಿಂಗ್​ಗೆ ಇದ್ದ ವಿಷಾದವೇನು?

ಸಂದರ್ಶನವೊಂದರಲ್ಲಿ ಕಾಂಗ್ರೆಸ್ ನಾಯಕ ರಾಜೀವ್ ಶುಕ್ಲಾ ಅವರು ಮನಮೋಹನ್ ಸಿಂಗ್ ಅವರ ಆಸೆಯನ್ನು ಬಹಿರಂಗಪಡಿಸಿದ್ದರು. ಮನಮೋಹನ್ ಸಿಂಗ್ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾಗ ತಮ್ಮ ಪಾಕಿಸ್ತಾನಿ ಸ್ನೇಹಿತರೊಂದಿಗೆ ರಾವಲ್ಪಿಂಡಿಗೆ ಹೋಗಿದ್ದರು. ಆ ಪ್ರವಾಸದ ಸಮಯದಲ್ಲಿ ಅವರು ಬೈಸಾಖಿಯ ದಿನದಂದು ಗುರುದ್ವಾರಕ್ಕೆ ಹೋಗಿದ್ದರು, ಆದರೆ ತಮ್ಮ ಹಳ್ಳಿಗೆ ಹೋಗಲು ಸಾಧ್ಯವಾಗಲಿಲ್ಲ.

Comments (0)

Your email address will not be published. Required fields are marked *

Back to top button