#Exclusive NewsTop Newsರಾಜ್ಯಸುದ್ದಿ

‘‘ಡ್ರೋಣ್‘’ಗೆ ಮತ್ತೆ ಬಂಧನ ಭೀತಿ….!

ಬೆಂಗಳೂರು: ಕೃಷಿ ಹೊಂಡದಲ್ಲಿ ಸೋಡಿಯಂ ಮೆಟಲ್ ಬಳಸಿದ ಆರೋಪದ ಮೇಲೆ ಜೈಲು ಸೇರಿ ಜಾಮೀನಿನ ಮೇಲೆ ಹೊರ ಬಂದಿರುವ ಡ್ರೋಣ್ ಪ್ರತಾಪ್​​ಗೆ ಮತ್ತೆ ಬಂಧನದ ಭೀತಿ ಎದುರಾಗಿದೆ.ಸೋಡಿಯಂ ರಸಾಯನಿಕ ವಿಚಾರದಲ್ಲಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದ ಡ್ರೋಣ್ ಪ್ರತಾಪ್​ಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. 9 ದಿನ ಜೈಲುವಾಸ ಅನುಭವಿಸಿದ್ದ ಪ್ರತಾಪ್​ಗೆ ಮತ್ತೆ ಜೈಲು ಸೇರುವ ಆತಂಕ ಎದುರಾಗಿದೆ. ಪ್ರತಾಪ್ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ಪ್ರಯಾಗ್ ದೂರು ನೀಡಿದ್ದಾರೆ.

ಮತ್ತೊಂದು ಆರೋಪ ಏನು..?

ಪಶು ವೈದ್ಯರಾಗಿರುವ ಪ್ರಯಾಗ್ ಅವರು, ಪ್ರತಾಪ್ ವಿರುದ್ಧ ಎಡಿಜಿಪಿ ಹಿತೇಂದ್ರ ಕುಮಾರ್​ಗೆ ದೂರು ನೀಡಿದ್ದಾರೆ. ಲೈಸೆನ್ಸ್ ಇಲ್ಲದೇ ಬೇರೆಯವರಿಗೆ ಡ್ರೋಣ್ ಹಾರಿಸಲು ಪ್ರತಾಪ್ ಪ್ರಚೋದನೆ ನೀಡಿದ್ದಾರೆ. ಲೈಸೆನ್ಸ್ ಇಲ್ಲದೇ ಡ್ರೋಣ್ ಹಾರಿಸಿ ಅದರ ಸಂಶೋಧನೆ ಮಾಡಿದ್ದೇನೆಂದು ಸುಳ್ಳು ಹೇಳುತ್ತಿದ್ದಾರೆ. ಕೃಷಿ ಮಾಡುವ ರೈತರಿಗೆ ಡ್ರೋಣ್ ಹೆಸರಲ್ಲಿ ಔಷಧಿ ಸಿಂಪಡಿಕೆ ಮಾಡಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

 

Comments (0)

Your email address will not be published. Required fields are marked *

Back to top button