#Exclusive NewsTop Newsದೇಶ/ವಿದೇಶಸುದ್ದಿ

ಬಾಂಗ್ಲಾದೇಶಕ್ಕೆ ದೆಹಲಿ ಆಟೋ ಪಾರ್ಟ್ಸ್ ರಫ್ತು ಬಂದ್​…..!

ನವದೆಹಲಿ : ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಉದ್ವಿಗ್ನತೆ ಮತ್ತು ಅಲ್ಪಸಂಖ್ಯಾತರ ಮೇಲಿನ ದಾಳಿಗಳನ್ನು ಉಗ್ರವಾಗಿ ಖಂಡಿಸಿರುವ ದೆಹಲಿ ಆಟೋ ಪಾರ್ಟ್ಸ್ ವ್ಯಾಪಾರಿಗಳು, ಇನ್ನು ಮುಂದೆ ಬಾಂಗ್ಲಾದೇಶಕ್ಕೆ ವಾಹನಗಳ ಬಿಡಿಭಾಗಗಳನ್ನು ರಫ್ತು ಮಾಡದಿರಲು ನಿರ್ಧರಿಸಿದ್ದಾರೆ.

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ವಿರುದ್ಧದ ಹಿಂಸಾಚಾರಕ್ಕೆ ಭಾರತದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದು, ಇದೀಗ ದೆಹಲಿ ವ್ಯಾಪಾರಿಗಳು ಬಾಂಗ್ಲಾದೇಶಕ್ಕೆ ಮರ್ಮಾಘಾತ ನೀಡಿದ್ದಾರೆ.

ಅಕ್ಷರಶಃ ದೆಹಲಿಯ ಆಟೋ ಪಾರ್ಟ್ಸ್ ವ್ಯಾಪಾರಿಗಳು ಬಾಂಗ್ಲಾದೇಶದೊಂದಿಗೆ ವ್ಯವಹಾರವನ್ನು ಬಹಿಷ್ಕರಿಸಿದ್ದಾರೆ. ದೆಹಲಿಯ ಕಾಶ್ಮೀರ್ ಗೇಟ್‌ನಲ್ಲಿರುವ ಆಟೋ ಪಾರ್ಟ್ಸ್ ವ್ಯಾಪಾರಿಗಳು ನೆರೆಯ ದೇಶದೊಂದಿಗೆ ವ್ಯವಹಾರವನ್ನು ನಿಲ್ಲಿಸಲು ನಿರ್ಧರಿಸಿದ್ದಾರೆ.

 

Comments (0)

Your email address will not be published. Required fields are marked *

Back to top button