#Exclusive NewsTop Newsದೇಶ/ವಿದೇಶರಾಜಕೀಯಸುದ್ದಿ
ಸಂಸದರನ್ನ ತಳ್ಳಿದ್ರು ಎಂದು ರಾಹುಲ್ ಗಾಂಧಿ ಮೇಲೆ ಆರೋಪ

ಬಿಜೆಪಿ ಸಂಸದ ಪ್ರತಾಪ್ ಸಾರಂಗಿಗೆ ಗಾಯಗಳಾಗಿದ್ದು, ರಾಹುಲ್ ಗಾಂಧಿಯೇ ನನ್ನನ್ನು ತಳ್ಳಿದ್ದು ಎಂದು ಆರೋಪಿಸಿದ್ದಾರೆ.
ಬಿ.ಆರ್.ಅಂಬೇಡ್ಕರ್ ವಿಚಾರ ಕುರಿತು ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಸಂಸತ್ತಿನ ಆವರಣದಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಬಿಜೆಪಿ ಸಂಸದ ಪ್ರತಾಪ್ ಸಾರಂಗಿ ಗಾಯಗೊಂಡಿದ್ದಾರೆ.
ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ತಳ್ಳಿದರು ಎಂದು ಸಾರಂಗಿ ಆರೋಪಿಸಿದ್ದಾರೆ. ಮತ್ತೊಂದೆಡೆ, ಬಿಜೆಪಿ ಸಂಸದರು ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಸಂಸತ್ತಿನ ಮಕರ ದ್ವಾರದಲ್ಲಿ ತಳ್ಳಿದರು ಎಂದು ಕಾಂಗ್ರೆಸ್ ಹೇಳಿಕೊಂಡಿದೆ.
ನಾನು ನಿಂತಿದ್ದೆ ರಾಹುಲ್ ಗಾಂಧಿ ಬೇರೊಬ್ಬ ಸಂಸದರನ್ನು ತಳ್ಳಿದ್ದರು, ಆ ಸಂಸದ ನನ್ನ ಮೇಲೆ ಬಿದ್ದು ನಾನು ಕೆಳಗೆ ಬಿದ್ದೆ ಎಂದು ಪ್ರತಾಪ್ ಹೇಳಿದ್ದಾರೆ.




