Top Newsಕ್ರೈಂ ಸ್ಟೋರಿರಾಜ್ಯಸುದ್ದಿ

ಬೆಂಗಳೂರಲ್ಲಿ ಮೊಬೈಲ್ ಕದ್ದು ಪರಾರಿಯಗಲು ಯತ್ನ: ಕಳ್ಳರನ್ನು ಬೆನ್ನಟ್ಟಿದ ಮಾಜಿ ಕಾರ್ಪೊರೇಟರ್ – ವಿಡಿಯೋ ವೈರಲ್

ಬೆಂಗಳೂರು: ಇತ್ತೀಚಿಗೆ ಬೆಂಗಳೂರಿನಲ್ಲಿ ಮೊಬೈಲ್ ಕಳ್ಳರ ಹಾವಳಿ ತೀವ್ರ ಹೆಚ್ಚಾಗಿದ್ದು, ಇದೀಗ ಮೊಬೈಲ್ ಕಳ್ಳತನ ಮಾಡಿ ಪರಾರಿ ಆಗಲು ಯತ್ನಿಸಿದ್ದ ಇಬ್ಬರೂ ಕಳ್ಳರನ್ನು ಮಾಜಿ ಕಾರ್ಪೊರೇಟರ್ ಗಣೇಶ್ ರೆಡ್ಡಿ ಅವರು ಚೇಸಿಂಗ್ ಮಾಡಿ ದಿಗಳು ಹಿಡಿಸಿರುವ ಘಟನೆ ಬೆಂಗಳೂರಿನ ಹೆಚ್ ಬಿ ಆರ್ ಲೇಔಟ್ ಬಳಿ ನಡೆದಿದೆ.

ಭಾನುವಾರ ಬೆಳಗ್ಗೆ ಕೆ. ಜಿ. ಹಳ್ಳಿ ಬಳಿ ಮಾಜಿ ಕಾರ್ಪೊರೇಟರ್ ಗಣೇಶ್ ರೆಡ್ಡಿ ಅವರು ಜಿಮ್​ಗೆ ಹೋಗುವಾಗ ದ್ಚಿಚಕ್ರ ವಾಹನದಲ್ಲಿ ಬಂದ ಇಬ್ಬರು ಖದೀಮರು ಯುವಕನೋರ್ವನಿಂದ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು. ಆಗ ಆತಂಕದಿಂದ ಯುವಕ ಕಳ್ಳ-ಕಳ್ಳ ಎಂದು ಚೀರಾಡಿದ್ದಾನೆ. ಇದನ್ನ ಗಮನಿಸಿದ ಗಣೇಶ್, ಕೂಡಲೇ ತಮ್ಮ ಕಾರಿನಲ್ಲಿ ಯುವಕನನ್ನು ಕೂರಿಸಿಕೊಂಡು ಖದೀಮರನ್ನ ಬೆನ್ನಟ್ಟಿದ್ದಾರೆ.‌ ಸುಮಾರು ಅರ್ಧ ಕಿ.ಮೀ ವರೆಗೂ ಬೆನ್ನಟ್ಟಿದ್ದಾರೆ. ತಪ್ಪಿಸಿಕೊಳ್ಳುವ ಭರದಲ್ಲಿ ಖದೀಮರು ದ್ಚಿಚಕ್ರವಾಹನದಿಂದ ಕೆಳಗೆ ಬಿದ್ದಿದ್ದಾರೆ.

ಕಾರಿನಿಂದ ಕೆಳಗಿಳಿದ ಗಣೇಶ್​, ಮೊಬೈಲ್ ನೀಡದಿದ್ದರೆ ಪೊಲೀಸ್ ಠಾಣೆಗೆ ಅವರ ದ್ವಿಚಕ್ರ ವಾಹನವನ್ನು ಒಪ್ಪಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ನಂತರ ಖದೀಮರು ಕದ್ದ ಮೊಬೈಲ್ ನೀಡಿ ದ್ಚಿಚಕ್ರವಾಹನ ಪಡೆದು ಸ್ಥಳದಿಂದ ಕಾಲ್ಕಿತ್ತಿದ್ದಾರೆ.‌ ಘಟನೆ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮಾಜಿ ಕಾರ್ಪೊರೇಟರ್​​ ಗಣೇಶ್ ರೆಡ್ಡಿ ಹೇಳಿದ್ದಿಷ್ಟು

ಈ ಬಗ್ಗೆ ಮಾಜಿ ಕಾರ್ಪೊರೇಟರ್​​ ಗಣೇಶ್ ರೆಡ್ಡಿ ಪ್ರತಿಕ್ರಿಯಿಸಿದ್ದು, ಬೆಳಗ್ಗೆ 5.40ಕ್ಕೆ ನಾನು ಜಿಮ್​ಗೆ ಹೋಗುತ್ತಿದೆ. ರಸ್ತೆಯಲ್ಲಿ ಒಬ್ಬ ಹುಡುಗ ಮೊಬೈಲ್ ಕಳ್ಳತನ ಆಗಿದೆ ಅಂತ ಓಡಿ ಬಂದ. ಇಬ್ಬರು ಹುಡುಗರು ಬೈಕ್​ನಲ್ಲಿ ಪಾಸ್ ಆಗುವುದನ್ನು ನಾನು‌ ನೋಡಿದೆ. ತಕ್ಷಣ ಹುಡುಗಗನ್ನ ಕಾರಿನಲ್ಲಿ ಕೂರಿಸಿಕೊಂಡು ಬೈಕ್ ಚೇಸ್ ಮಾಡಿದೆ. ಹೆಚ್.ಬಿ.ಆರ್ ಲೇಔಟ್ 8ನೇ ಕ್ರಾಸ್ ಬಳಿ ನನ್ನ ಕಾರು ಅವರ ಬೈಕ್​ಗೆ ಟಚ್ ಆಯ್ತು. ಆ ಇಬ್ಬರು ಹುಡುಗರಲ್ಲಿ ಒಬ್ಬ ಚಾಕು ತೆಗೆದ. ನಾನು ಆಗ ಮೊಬೈಲ್ ವಾಪಸ್ ಕೊಡು, ಇಲ್ಲ ಅಂದರೆ ನಿಮ್ಮ ಬೈಕ್ ಸ್ಟೇಷನ್​ಗೆ ತೆಗೆದುಕೊಂಡು ಹೋಗುತ್ತೇನೆ ಅಂದೆ. ಬಳಿಕ ಮೊಬೈಲ್ ಎಸೆದು ಎಸ್ಕೇಪ್ ಆದರು. ಬಳಿಕ ಆ ಹುಡುಗನಿಗೆ ಮೊಬೈಲ್ ಕೊಟ್ಟು ವಾಪಸ್ ಹೋದೆ ಎಂದಿದ್ದಾರೆ.

Comments (0)

Your email address will not be published. Required fields are marked *

Back to top button