Top Newsರಾಜ್ಯಸುದ್ದಿ

ಚಿಕ್ಕಬಳ್ಳಾಪುರ ಹೂದೋಟಕ್ಕೆ ದೃಷ್ಟಿ ಆಗದಂತೆ ನಟಿ ಶ್ರೀಲೀಲಾ ಫೋಟೋ ಹಾಕಿದ ರೈತ!

ಚಿಕ್ಕಬಳ್ಳಾಪುರ: ಬೆಳೆಗಳಿಗೆ ದೃಷ್ಟಿ ತಾಕದಂತೆ ಮಾಡಲು ಮನೆಯಲ್ಲಿ ಬಳಸಿ ತೂತು ಬಿದ್ದ ಮಣ್ಣಿನ ಮಡಿಕೆಗೆ ಸುಣ್ಣ ಬಳಿದು, ಮೂಗು, ವಿಕಾರ ಕಣ್ಣುಗಳನ್ನು ತಿದ್ದಿ ದೃಷ್ಟಿ ಬೊಂಬೆ ಮಾಡಿ ರೈತರು ತಮ್ಮ ಹೊಲದಲ್ಲಿಯೇ ಸಿಗುವ ಕೋಲುಗಳಿಗೆ ಸಿಕ್ಕಿಸಿ ನಿಲ್ಲಿಸುತ್ತಿದ್ದರು. ಆದರೆ ಇಲ್ಲೋಬ್ಬ ರೈತ ಮಣ್ಣಿನ ಕರಿ ಮಡಿಕೆಗಳು ಹೆಚ್ಚಾಗಿ ಸಿಗುತ್ತಿಲ್ಲ ಆದ್ದರಿಂದ ದೃಷ್ಟಿ ತಾಕದಂತೆ ತಡೆಯಲು ರೈತರು ಹೈಟೆಕ್ ವಿಧಾನ ಕಂಡುಕೊಂಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಹೊಸಹಳ್ಳಿ ಆರೂಢಿ ರಸ್ತೆ ಬದಿಯಲ್ಲಿ ಸುಂಗಧರಾಜ ಹೂವಿನ ಬೆಳೆಯ ನಡುವೆ ರೈತರೊಬ್ಬರು ದೃಷ್ಟಿ ಬೊಂಬೆ ಬದಲಿಗೆ ನಟಿ ಶ್ರೀಲೀಲಾ ಫೋಟೋ ಬಳಸಿದ್ದು, ಈ ಫೋಟೋಗಳು ಎಲ್ಲರ ಗಮನ ಸೇಳೆದಿದ್ದಾನೆ. ಸುಗಂಧರಾಜ ಹೂವಿನ ತೋಟದ ಮಧ್ಯೆ ನಟಿ ಶ್ರೀಲೀಲಾ ಫೋಟೋ ಹಾಕಲಾಗಿದ್ದು ದಾರಿ ಹೋಕರ ಕಣ್ಣು ಕುಕ್ಕುತ್ತಿದೆ.

ಇತ್ತೀಚೆಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಟಿಯರ ಭಾವಚಿತ್ರಗಳನ್ನ ದೃಷ್ಟಿ ಬೊಂಬೆಯಾಗಿ ಬಳಸುತ್ತಿದ್ದು, ಸಿನಿಮಾ ನಟಿಯರ ಫ್ಲೆಕ್ಸ್‌ಗಳನ್ನ ಬೆಳೆಗಳ ನಡುವೆ ನೇತುಹಾಕುತ್ತಿದ್ದಾರೆ. ರಸ್ತೆಯಲ್ಲಿ ಹೋಗುವವರು ಬೆಳೆ ಹೇಗಿದೆ ಎಂದು ನೋಡುವುದಕ್ಕೂ ಮುನ್ನವೇ ಥಟ್ಟನೆ ಕಣ್ಣಿಗೆ ಬಿಳುತ್ತಿರುವುದೇ ಈ ಸಿನಿಮಾ ತಾರೆಯರ ಫ್ಲೆಕ್ಸ್‌ಗಳು. ಹೀಗಾಗಿ ಬೆಳೆಗೆ ದೃಷ್ಟಿ ಆಗಲ್ಲ ಅನ್ನೋ ನಂಬಿಕೆ ರೈತರದ್ದಾಗಿದೆ.

Comments (0)

Your email address will not be published. Required fields are marked *

Back to top button