#Exclusive NewsTop Newsಜಿಲ್ಲೆಸುದ್ದಿ
ಎಸ್.ಜಯಣ್ಣ ಅವರ ಅಂತಿಮ ದರ್ಶನದಲ್ಲಿ ಮುಖ್ಯಮಂತ್ರಿಗಳು ಭಾಗಿ

ಚಾಮರಾಜನಗರ: ಮಂಗಳವಾರ ಮಧ್ಯರಾತ್ರಿ ಹೃದಯಾಘಾತದಿಂದ ನಿಧನರಾದ ಕೊಳ್ಳೇಗಾಲದ ಮಾಜಿ ಶಾಸಕ ಮತ್ತು ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎಸ್ ಜಯಣ್ಣ ಅವರ ಅಂತಿಮ ದರ್ಶನ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ . ಮೊದಲಿಗೆ ಸಿದ್ದರಾಮಯ್ಯ ಮತ್ತು ಜಯಣ್ಣ ಇಬ್ಬರೂ ಜೆಡಿಎಸ್ ನಲ್ಲಿದ್ದರು ಮತ್ತು ಜಯಣ್ಣ 2013 ರಲ್ಲಿ ಕಾಂಗ್ರೆಸ್ ಟಿಕೆಟ್ನಿಂದ ಸ್ಪರ್ಧಿಸಿ ಕೊಳ್ಳೇಗಾಲದ ಶಾಸಕರಾಗಿದ್ದರು. ಅವರ ಪಾರ್ಥೀವ ಶರೀರದ ಮುಂದೆ ಸಿದ್ದರಾಮಯ್ಯ ಭಾವುಕರಾಗಿದ್ದನ್ನು ದೃಶ್ಯಗಳಲ್ಲಿ ನೋಡಬಹುದು.ಅಂತಿಮ ದರ್ಶನದಲ್ಲಿ ಸಚಿವರಾದ ಎಚ್.ಸಿ.ಮಹದೇವಪ್ಪ ಮತ್ತು ಕೆ.ವೆಂಕಟೇಶ್ ಕೂಡ ಪಾಲ್ಗೋಂಡಿದ್ದರು.




