#Exclusive NewsTop Newsರಾಜ್ಯಸುದ್ದಿ

ಅರಣ್ಯ ಭೂಮಿ ವಶಕ್ಕೆ ಕಠಿಣ ಕಾನೂನುಗಳಿದ್ದರೂ ಅತಿಕ್ರಮಣ : ಈಶ್ವರ್ ಖಂಡ್ರೆ

ಬೆಂಗಳೂರು: ದೀರ್ಘಾವಧಿ ಗುತ್ತಿಗೆ ಅವಧಿಗೆ ಅರಣ್ಯ ಪ್ರದೇಶಗಳನ್ನು ಒತ್ತುವರಿ ಮಾಡಿಕೊಂಡು ಗುತ್ತಿಗೆ ಪಾವತಿಸದ ಕಂಪನಿಗಳು ಮತ್ತು ಏಜೆನ್ಸಿಗಳ ಗುತ್ತಿಗೆಯನ್ನು ರದ್ದುಗೊಳಿಸುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಸಚಿವ ಈಶ್ವರ್ ಬಿ ಖಂಡ್ರೆ ಅವರು ಹೇಳಿದರು.

ನಗರದಲ್ಲಿ ನಡೆದ ‘ಮೈಫಾರೆಸ್ಟ್’ 60ನೇ ವರ್ಷದ ಸಂಭ್ರಮಾಚರಣೆ ಹಾಗೂ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಅರಣ್ಯ ಭೂಮಿ ರಕ್ಷಣೆಗೆ ಹಲವು ಹಾಗೂ ಕಠಿಣ ಕಾನೂನುಗಳಿದ್ದರೂ ಅತಿಕ್ರಮಣ ಹಾಗೂ ದೀರ್ಘಾವಧಿ ಗುತ್ತಿಗೆ ಬಾಕಿ ಇರುವ ಪ್ರಕರಣಗಳು ನ್ಯಾಯಾಲಯಗಳಲ್ಲಿ ಬಾಕಿ ಉಳಿದಿವೆ ಎಂದು ಹೇಳಿದರು.

ನಾವು ಭೂಮಿಯ ಸ್ವರೂಪವನ್ನು ಬದಲಾಯಿಸಲಾಗುವುದಿಲ್ಲ. ಗುತ್ತಿಗೆ ಅವಧಿಯಲ್ಲಿ ಭೂ ಬಳಕೆಯನ್ನು ಬದಲಾಯಿಸಬಾರದು ಎಂಬುದು ಎಲ್ಲಾ ಗುತ್ತಿಗೆ ಒಪ್ಪಂದಗಳಲ್ಲಿನ ಇರುವ ಪ್ರಮುಖ ಷರತ್ತಾಗಿದೆ. ಅರಣ್ಯಾಧಿಕಾರಿಗಳು ಅರಣ್ಯ ಹೊದಿಕೆ ಹೆಚ್ಚಳಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದ್ದು, ಅರಣ್ಯ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಅಲ್ಲದೆ, ಅರಣ್ಯ ಹೊದಿಕೆ ಹೆಚ್ಚಳಕ್ಕೆ ಇಚ್ಛಾಶಕ್ತಿಯನ್ನೂ ಪ್ರದರ್ಶಿಸಬೇಕು. ಹಾಗಾದರೆ ಮಾತ್ರ ಕೆಲವೇ ವರ್ಷದಲ್ಲಿ ರಾಜ್ಯದ ಅರಣ್ಯ ಹೊದಿಕೆ ಶೇ.33ರಷ್ಟು ಹೆಚ್ಚಳವಾಗಲಿದೆ. ಸರ್ಕಾರ ಗುತ್ತಿಗೆ ಪಡೆದಿರುವ ಹಾಗೂ ಒತ್ತುವರಿ ಮಾಡಿಕೊಂಡಿರುವ ಭೂಮಿಯನ್ನು ವಶಪಡಿಸಿಕೊಳ್ಳಲು ಶ್ರಮಿಸುತ್ತಿದ್ದು, ಹೊಸದಾಗಿ ಒಂದು ಇಂಚು ಭೂಮಿಯನ್ನೂ ಅತಿಕ್ರಮಿಸಲು ಬಿಡುವುದಿಲ್ಲ ಎಂದು ತಿಳಿಸಿದರು.

 

Comments (0)

Your email address will not be published. Required fields are marked *

Back to top button