Top Newsರಾಜ್ಯಸುದ್ದಿ

ಬೆಂಗಳೂರು: ಬಿಎಂಟಿಸಿ ಚಾಲಕರ, ನಿರ್ವಾಹಕರಿಗೆ ಸಿಹಿ ಸುದ್ದಿ ನೀಡಿದ ಪ್ರಭಾಕರ್ ರೆಡ್ಡಿ

ಬೆಂಗಳೂರು: ಇತ್ತೀಚಿಗೆ ಬಿಎಂಟಿಸಿ ಬಸ್​ ಚಾಲಕ ಮತ್ತು ನಿರ್ವಾಹಕರ ಮೇಲೆ ನಿರಂತರವಾಗಿ ಹಲ್ಲೆ ಆಗಿದ್ದವು. ಇದಕ್ಕೆ ಪ್ರಮುಖ ಕಾರಣ ಚಾಲಕರಿಗೆ ನೀಡಿದ್ದ ಟೈಮ್ ಬಾಂಡ್ ಎಂದು ತಿಳಿದು ಬಂದಿದೆ. ಇದೀಗ, ಬಿಎಂಟಿಸಿ ಅಧಿಕಾರಿಗಳು ಪ್ರತಿ ಮಾರ್ಗದಲ್ಲೂ ಬಸ್​ ಸಂಚಾರದ ಸಮಯ ಹೆಚ್ಚಳ ಮಾಡುವ ಮೂಲಕ ಚಾಲಕರ ಟೆನ್ಷನ್​ ಕಡಿಮೆ ಮಾಡಿದ್ದಾರೆ.ಬಿಎಂಟಿಸಿ ಬಸ್​ ಸಂಚಾರ ಸಮಯವನ್ನು ಅಧಿಕಾರಿಗಳು ಏರಿಕೆ ಮಾಡಿದ್ದಾರೆ. ಇದರಿಂದ, ಕಡಿಮೆ ಸಮಯದಲ್ಲಿ ವೇಗವಾಗಿ ತೆರಳಲಿ ನಿಗದಿತ ನಿಲ್ದಾಣ ತಲುಪಬೇಕೆಂಬ ಟೆನ್ಷನ್​ನಿಂದ ಚಾಲಕರು ನಿರಾಳರಾಗಿದ್ದಾರೆ. ಬಿಎಂಟಿಸಿ ಬಸ್​ಗಳು ಸಂಚಾರ ಮಾಡುವ 1800 ಮಾರ್ಗಳಲ್ಲೂ ಟೈಮ್ ಲಿಮಿಟ್ ಕಡಿಮೆ ಮಾಡಲಾಗಿದೆ.

ಪ್ರತಿಯೊಂದು ಮರ್ಗಾದಲ್ಲೂ 15 ರಿಂದ 20 ನಿಮಿಷಗಳ ಕಾಲ ಹೆಚ್ಚಿನ ಸಮಯ ನೀಡಲಾಗುತ್ತದೆ. ಇದರಿಂದ ನಗರದಲ್ಲಿ ಆಗುತ್ತಿರುವ ಚಾಲಕ, ನಿರ್ವಾಹಕರ ಮೇಲಿನ ಹಲ್ಲೆ ಮತ್ತು ಅಪಘಾತಗಳು ಕಡಿಮೆ ಆಗಲಿವೆ. ಈ ಹಿಂದೆ ನಡೆದಿರುವ ಸಾಕಷ್ಟು ಹಲ್ಲೆ ಮತ್ತು ಅಪಘಾತಗಳಲ್ಲಿ ಬಿಎಂಟಿಸಿಯ ಚಾಲಕರು ಟೈಮ್ ಕವರ್ ಮಾಡಲು, ವೇಗವಾಗಿ ಬಸ್​ ಚಲಾಯಿಸುತ್ತಿದ್ದರು. ಇದರಿಂದ ಅಪಘಾತಗಳು ಸಂಭವಿಸುತ್ತಿದ್ದವು.

ಬಿಎಂಟಿಸಿಯ 58 ಸಾವಿರ ಟ್ರಿಪ್​ಗಳಲ್ಲೂ ಟೈಮ್ ಲಿಮಿಟ್ ಹೆಚ್ಚು ಮಾಡಲು ಬಿಎಂಟಿಸಿ ಮುಂದಾಗಿದೆ. ಈ ವಿಚಾರ ತಿಳಿದು ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ.

 

Comments (0)

Your email address will not be published. Required fields are marked *

Back to top button