Top Newsರಾಜ್ಯಸುದ್ದಿ

ಇಂದಿನಿಂದ ಬಸವನಗುಡಿ ಇತಿಹಾಸ ಪ್ರಸಿದ್ಧ ಕಡಲೆಕಾಯಿ ಪರಿಷೆ : ಫೋಟೋಸ್​ ನೋಡಿ

ಬೆಂಗಳೂರು: ಬೆಂಗಳೂರು ಕರಗ ಎಷ್ಟು ಪ್ರಸಿದ್ಧವೋ ಅಷ್ಟೇ ಪ್ರಸಿದ್ಧಿ ಪಡೆದಿರುವುದು ಕಡಲೆಕಾಯಿ ಪರಿಷೆ ಜಾತ್ರೆ. ಬೆಂಗಳೂರಿನಲ್ಲಿ ಪ್ರತಿವರ್ಷ ಕಾರ್ತಿಕ ಮಾಸದ ಕೊನೆ ಸೋಮವಾರ ಬಸವನಗುಡಿಯ ದೊಡ್ಡ ಬಸವನ ದೇವಸ್ಥಾನದ ಹತ್ತಿರ ಕಡಲೆಕಾಯಿ ಪರಿಷೆ ನಡೆಯುತ್ತದೆ.

ದೊಡ್ಡಗಣಪ ಹಾಗೂ ದೊಡ್ಡ ಬಸವನ ಸನ್ನಿಧಾನದಲ್ಲಿ ಬಿಬಿಎಂಪಿ ಹಾಗೂ ಮುಜರಾಯಿ ಇಲಾಖೆ ಜಂಟಿಯಾಗಿ ಆಯೋಜಿಸುವ ಕಡಲೆಕಾಯಿ ಪರಿಷೆಗೆ ಈಗಾಗಲೇ ಅಧಿಕೃತ ಚಾಲನೆ ಸಿಕ್ಕಿದೆ.

ಕಡಲೆಕಾಯಿ ಪರಿಷೆ ಇತಿಹಾಸದಲ್ಲಿ ಇದೇ ಮೊದಲನೆಯ ಬಾರಿಗೆ ಹಾಕಿರುವ ಸುಮಾರು 4-5 ಸಾವಿರ ಅಂಗಡಿಗಳಿಗೆ ಶುಲ್ಕ ರಹಿತವಾಗಿ ಅವಕಾಶ ಮಾಡಿಕೊಡಲಾಗಿದೆ. ಜೊತೆಗೆ ಮೊದಲನೆಯ ಬಾರಿಗೆ ರಾಮಕೃಷ್ಣ ಆಶ್ರಮ ವೃತ್ತ ಗಣೇಶ ಭವನ್ ವೃತ ಹಾಗೂ ಸುತ್ತುಮುತ್ತಲಿನ ರಸ್ತೆಗಳೆಲ್ಲ ವಿಜೃಂಭಣೆಯ ದೀಪಾಲಂಕಾರ ಮಾಡಲಾಗಿದೆ. ಇಂದು ಸಂಜೆ 6:15ಕ್ಕೆ ಕೆಂಪಾಬುದಿ ಕೆರೆಯಲ್ಲಿ ವಿಶೇಷ ತೆಪ್ಪೋತ್ಸವ ನಡೆಯಲಿದೆ. ಬಸವಣ್ಣನ ದರ್ಶನಕ್ಕೆ ಬರುವ ಸಾರ್ವಜನಿಕರಿಗೆ ವಿಶೇಷ ಸಾಲಿನ ದರ್ಶನ ವ್ಯವಸ್ಥೆ ಹಾಗೂ ಹಿರಿಯರಿಗೆ ವಿಶೇಷ ಸರತಿ ಸಾಲಿನ ವ್ಯವಸ್ಥೆ ಮಾಡಲಾಗಿದೆ.

ಬಸವನಗುಡಿಯ ಕಡಿಲೆಕಾಯಿ ಪರಿಷೆಯಲ್ಲಿ 10 ಬಗೆಯ ಬಗೆಯ ಕಡಲೆಕಾಯಿಗಳು ಬಂದಿವೆ. ಕೋಲಾರ, ತಮಿಳುನಾಡು, ಚಿಕ್ಕಬಳ್ಳಾಪುರ, ಆಂಧ್ರ ಪ್ರದೇಶ, ಸೇರಿದಂತೆ ವಿವಿಧೆಡೆಯಿಂದ ರೈತರು ಬಂದಿದ್ದು, ನಾಟಿ, ಫಾರಂ, ಬೋಂಡಾ ಹಾಗೂ ಬಾದಮಿ ಕಡಲೆಕಾಯಿಗಳು ಪ್ರಮುಖ ಆಕರ್ಷಣೆಯಾಗಿದ್ದವು. ಈ ಬಾರಿ ಕಡಲೆಕಾಯಿ ಬೆಲೆ ಕೊಂಚ ಜಾಸ್ತಿಯಾಗಿದ್ದು, ವ್ಯಾಪಾರ ವಹಿವಾಟು ಕೂಡ ಚೆನ್ನಾಗಿ ನಡೆಯುತ್ತಿದೆ ಅಂತ ವ್ಯಾಪಾರಸ್ಥರು ಖುಷಿ ಪಟ್ಟರು. ಬಾದಾಮಿ ಕಡಲೆಕಾಯಿ – ಸೇರಿಗೆ 50 ರೂ., ಬೋಂಡಾಕಾಯಿ – 70 ರೂ., ನಾಟಿ ಕಡಲೆಕಾಯಿ – 60 ರೂ. ಫಾರಂ‌ಕಡಲೆಕಾಯಿ – 70 ರೂ. ಇದೆ.

ಹೀಗೆ ನಡೆದುಕೊಂಡು ಬರುತ್ತಿದ್ದ ಸಮಯದಲ್ಲೇ ಬಸವನಗುಡಿ ಪ್ರದೇಶದಲ್ಲಿ ನಂದಿಯ ವಿಗ್ರಹವೊಂದು ದೊರಕಿತು. ನಂತರ ಈ ಸ್ಥಳದಲ್ಲಿ ನಾಡಪ್ರಭು ಕೆಂಪೇಗೌಡರು 16ನೇ ಶತಮಾನದಲ್ಲಿ ನಂದಿಯ ವಿಗ್ರಹದ ಸುತ್ತಲೂ ದೇವಾಲಯವನ್ನು ನಿರ್ಮಿಸಿದರು. ಇದನ್ನು ಬಸವನಗುಡಿ ಅಥವಾ ಬಿಗ್​ ಬುಲ್​ ಟೆಂಪಲ್​​ ಎಂದು ಕರೆಯಾಗುತ್ತದೆ. ಕಡಲೆಕಾಯಿ ಪರಿಷೆ ಈ ದೇವಾಲಯದ ಸುತ್ತ ಕೇಂದ್ರೀಕೃತವಾಗಿದೆ ಮತ್ತು ಬಸವ ರೈತರು ಅರ್ಪಿಸಿದ ನೆಲಗಡಲೆಯನ್ನು ಸ್ವೀಕರಿಸಿ ಆಶೀರ್ವದಿಸುತ್ತಾನೆ ಎಂದು ರೈತರ ನಂಬಿಕೆಯಾಗಿದೆ.

ಪ್ರತಿ ವರ್ಷ ಕಾರ್ತಿಕ ಮಾಸದ ಕೊನೆಯ ಸೋಮವಾರದಂದು ಬಸವನಗುಡಿ ಕಡಲೆ ಕಾಯಿ ಪರಿಷೆ ನಡೆಯುತ್ತದೆ. ಕಾರ್ತಿಕ ಮಾಸದ ಸೋಮವಾರವು ಭಗವಾನ್​ ಶಿವನ ನೆಚ್ಚಿನ ದಿನವಾಗಿದ್ದು, ನಂದಿಯು ಶಿವನ ವಾಹನವಾಗಿರುವುದರಿಂದ ನಂದಿಗೆ ಈ ದಿನಗಳು ಪ್ರಿಯವಾಗಿದೆ. ಆದ್ದರಿಂದ ಕಾರ್ತಿಕ ಮಾಸದಲ್ಲಿ ಕಡೆಲೆಕಾಯಿ ಪರಿಷೆ ನಡೆಯುತ್ತದೆ.

Comments (0)

Your email address will not be published. Required fields are marked *

Back to top button