#Exclusive NewsTop Newsಜಿಲ್ಲೆಫ್ರೀಡಂ ಟಿವಿ ವಿಶೇಷವಿಶೇಷಶಿಕ್ಷಣಸುದ್ದಿ
ಅತಿಥಿ ಶಿಕ್ಷಕರು ಮತ್ತು ಅಡುಗೆ ಸಹಾಯಕರ ನೇಮಕಕ್ಕೆ ಲಂಚದ ಬೇಡಿಕೆ-“ಹೆಡ್‌ಮಾಸ್ಟರ್”

ಕೊಡಗು:ಇತ್ತಿಚೀನ ದಿನಗಳಲ್ಲಿ ಶಾಲಾ ಕಾಲೇಜುಗಳಲ್ಲಿಯು ಸಹ ಲಂಚದಾರೋಪಗಳು ಕೇಳಿ ಬರುತ್ತಿವೆ. ಲಂಚ ಪಡೆಯುವ ವೇಳೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯರೋಬ್ಬರು ಲೋಕಾಯುಕ್ತರ ಬಲೆಗೆ ಸಿಕ್ಕಿಬಿದ್ದಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಮಾಲ್ದಾರೆ ಎಂಬ ಗ್ರಾಮದಲ್ಲಿ ನಡೆದಿದೆ.
ಮಾಲ್ದಾರೆ ದಿಡ್ಡಳ್ಳಿ ಆಶ್ರಮ ಶಾಲೆಯ ಹೆಡ್ ಮಾಸ್ಟರ್ ಸಿದ್ಧಲಿಂಗ ಶೆಟ್ಟಿ ಎಂಬುವವರೇ ಲೋಕಾಯುಕ್ತರ ಬಲೆಗೆ ಬಿದ್ದಿದ್ದು. ಅತಿಥಿ ಶಿಕ್ಷಕರು ಹಾಗೂ ಅಡುಗೆ ಸಹಾಯಕರ ನೇಮಕಕ್ಕೆ 20 ಸಾವಿರ ರೂಪಾಯಿ ಬೇಡಿಕೆಯಿಟ್ಟಿದ್ದ ಮುಖ್ಯೋಪಾಧ್ಯಾಯ.
DYSP ಪ್ರಕಾಶ್ ಕೆ.ಸಿ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ಲೋಕೆಶ್ ಹಾಗೂ ಸಿಬ್ಬಂದಿಗಳ ನೇತೃತ್ವದಲ್ಲಿ ದಾಳಿ ನಡೆದಿದ್ದು,ಹೆಡ್‌ಮಾಸ್ಟರ್ ಹಣದ ಸಮೇತ ಸಿಕ್ಕಿಬಿದ್ದಿದ್ದಾರೆ.




