Top News

ಉನ್ನತ ವ್ಯಾಸಂಗಕ್ಕಾಗಿ ಅಣ್ಣಾಮಲೈ ಲಂಡನ್‌ಗೆ, ತಮಿಳುನಾಡು ಬಿಜೆಪಿ ಅಧ್ಯಕ್ಷ ಪಟ್ಟ ಯಾರಿಗೆ?

ಕರ್ನಾಟಕದ ಖಡಕ್ ಪೊಲೀಸ್ ಆಫೀಸರ್ ಆಗಿದ್ದ, ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಲಂಡನ್‌ನಲ್ಲಿ ಅಧ್ಯಯನ ಮಾಡಲು ತೆರಳುತ್ತಿರುವುದರಿಂದ, ಪಕ್ಷಕ್ಕೆ ಹೊಸ ಅಧ್ಯಕ್ಷರೇ ಅಥವಾ ಹಂಗಾಮಿ ಅಧ್ಯಕ್ಷರೇ ಎಂಬ ಪ್ರಶ್ನೆ ಎದ್ದಿದೆ. ಅಣ್ಣಾಮಲೈ ಇಲ್ಲದಿರುವಾಗ, ಪಕ್ಷದ ನೇತೃತ್ವವನ್ನು ಯಾರು ವಹಿಸಿಕೊಳ್ಳುತ್ತಾರೆ ಎಂಬುದು ಈಗ ಸದ್ಯದ ಪ್ರಶ್ನೆ.

ಇಂಗ್ಲೆಂಡ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು ‘ಅಂತರರಾಷ್ಟ್ರೀಯ ರಾಜಕಾರಣ’ದ ಕುರಿತು ಪ್ರತಿ ವರ್ಷ ನೀಡುವ ಪ್ರಮಾಣಪತ್ರ ಕೋರ್ಸ್‌ಗೆ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಆಯ್ಕೆಯಾಗಿದ್ದಾರೆ. ಈ ಕೋರ್ಸ್‌ಗಾಗಿ ಇಂದು ಮಧ್ಯರಾತ್ರಿ ಲಂಡನ್‌ಗೆ ತೆರಳುತ್ತಿರುವ ಅಣ್ಣಾಮಲೈ ಜನವರಿ ತಿಂಗಳವರೆಗೆ ಅಲ್ಲಿಯೇ ತಂಗಿ ಓದಲಿದ್ದಾರೆ. ಇದರಿಂದಾಗಿ ಸುಮಾರು 4 ತಿಂಗಳು ತಮಿಳುನಾಡಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು ಇಲ್ಲದಂತಾಗಿದೆ.


ಹೊಸ ಅಧ್ಯಕ್ಷರು ಯಾರು.?

ಹೀಗಾಗಿ ತಮಿಳುನಾಡು ಬಿಜೆಪಿಗೆ ಹಂಗಾಮಿ ಅಧ್ಯಕ್ಷರಾಗಿ ಯಾರನ್ನು ನೇಮಿಸಬಹುದು ಎಂದು ಬಿಜೆಪಿ ರಾಷ್ಟ್ರೀಯ ನಾಯಕತ್ವ ಚಿಂತನೆ ನಡೆಸಿದೆ. ನಟಿ ಖುಷ್ಬು ಅವರನ್ನು ತಮಿಳುನಾಡು ಬಿಜೆಪಿ ಅಧ್ಯಕ್ಷರನ್ನಾಗಿ ನೇಮಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಇದುವರೆಗೆ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಇಂದು ಸಂಜೆ ಅಥವಾ ನಾಳೆ ಬೆಳಿಗ್ಗೆಯೊ ಹೊಸ ಅಧ್ಯಕ್ಷರ ಹೆಸರು ಘೋಷಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಅದೇ ಸಮಯದಲ್ಲಿ ಹೊಸ ಅಧ್ಯಕ್ಷರನ್ನು ನೇಮಿಸುವ ಸಾಧ್ಯತೆಯಿಲ್ಲ ಮತ್ತು ಅಣ್ಣಾಮಲೈ ಅವರೇ ಮುಂದುವರಿಯಲಿದ್ದಾರೆ ಎನ್ನಲಾಗುತ್ತಿದೆ.

Comments (0)

Your email address will not be published. Required fields are marked *

Back to top button