Top Newsಕ್ರೈಂ ಸ್ಟೋರಿರಾಜ್ಯ

ದರ್ಶನ್ ಫೋಟೊ ಹಿಂದೆ IPS ವಾರ್..?

ನಟ ದರ್ಶನ್ ಪರಪ್ಪನ ಅಗ್ರಹಾರ  ಜೈಲಿನಲ್ಲಿ ಮೋಜು ಮಸ್ತಿ ಮಾಡ್ತಿರೋ ಫೋಟೋ ರಿವೀಲ್ ಪ್ರಕರಣದಲ್ಲಿ  ಇಬ್ಬರು ಐಪಿಎಸ್​ ಅಧಿಕಾರಿಗಳ ಪಾತ್ರದ ಅನುಮಾನ ವ್ಯಕ್ತವಾಗಿದೆ. ಫೋಟೋ ವೈರಲ್  ಬೆನ್ನಲ್ಲೇ ಈ ಮಾತು ಕೇಳಿಬರ್ತಿದೆ. ಇಬ್ಬರು ಐಪಿಎಸ್​ ಅಧಿಕಾರಿಗಳ ನಡುವಿನ  ಮುಸುಕಿನ ಗುದ್ದಾಟ ಮತ್ತೆ ಬೆಳಕಿಗೆ  ಬಂದಿದೆ.  ದರ್ಶನ್ ಫೋಟೋ  ಅನ್ನು ಮಾಧ್ಯಮಗಳಿಗೆ ಸೋರಿಕೆ  ಮಾಡಿಸಿದ್ದು ಒಬ್ಬ ಹಿರಿಯ ಐಪಿಎಸ್​ ಎನ್ನುವ ಗುಸುಗುಸು ಇಲಾಖೆಯಲ್ಲಿ ಕೇಳಿಬರ್ತಿದೆ. ಈ ಐಪಿಎಸ್​ ಅಧಿಕಾರಿಯ  ಆಪ್ತ ಪೊಲೀಸರು  ದರ್ಶನ್ ಫೋಟೋ ವನ್ನು ಮೀಡಿಯಾಗೆ ಹರಿಬಿಟ್ಟಿದ್ದಾರೆ. ಈ ಮೂಲಕ ಜೈಲು ಉಸ್ತುವಾರಿ ವಹಿಸಿಕೊಂಡಿರೋ ಮತ್ತೊಬ್ಬ ಐಪಿಎಸ್​ ಅಧಿಕಾರಿಗೆ ಮುಜುಗರ ತರಲು ಮುಂದಾಗಿದ್ದರು.  ಆದರೆ ಈ ಘಟನೆ ಇಡೀ ಪೊಲೀಸ್ ಇಲಾಖೆಯ ಮಾನ ಕಳೆದಿದೆ.  ಜೈಲಲ್ಲಿ  ಹಣ ಕೊಟ್ಟರೆ ಐಶಾರಾಮಿ ಬದುಕು ಸಾಧ್ಯ ಎಂಬ ಸುದ್ದಿ ಫೋಟೋ ಮೂಲಕ ಬಟಾಬಯಲಾಗಿದೆ.

ಈ ಇಬ್ಬರು ಐಪಿಎಸ್​ ಅಧಿಕಾರಿಗಳ  ಪೈಕಿ ಒಬ್ಬರು ಡಿಜಿಪಿ ದರ್ಜೆಯವರು, ಮತ್ತೊಬ್ಬರು ಎಡಿಜಿಪಿ ರ್ಯಾಂಕ್ ನ ಅಧಿಕಾರಿಯಾಗಿದ್ದಾರೆ.  ಈ ಇಬ್ಬರಿಗೂ ದಶಕಗಳಿಂದಲೂ ವೃತ್ತಿವೈಷಮ್ಯವಿದೆ. ಮಹತ್ವದ ಹುದ್ದೆಗಾಗಿ ಇಬ್ಬರ ಮಧ್ಯೆ ಹಲವು ಸಲ ಭಾರಿ ಫೈಟ್ ನಡೆದಿತ್ತು.  ಆದರೆ ಒಬ್ಬರಿಗೆ ಹುದ್ದೆ ಒಲಿದು ಬಂದರೆ ಮತ್ತೊಬ್ಬರಿಗೆ ಜೈಲು ಉಸ್ತುವಾರಿ ಸಿಕ್ಕಿತ್ತು. ಈ ವೃತ್ತಿ ವೈಷಮ್ಯ ದರ್ಶನ್ ಫೋಟೋ ವೈರಲ್  ಕೇಸ್​ ನಲ್ಲೂ ಮರುಕಳಿಸಿದೆ. ಅಧಿಕಾರಿಗಳ ಈ ವೃತ್ತಿ ಮತ್ಸರ  ಇಲಾಖೆಯ ಕೆಲ ಪ್ರಮಾಣಿಕ, ಶಿಸ್ತಿನ ಅಧಿಕಾರಿಗಳ ಬೇಸರಕ್ಕೂ ಕಾರಣವಾಗಿದೆ.

 

Comments (0)

Your email address will not be published. Required fields are marked *

Back to top button