ಮನರಂಜನೆಸಿನಿಮಾ

ಅಡ್ವಾನ್ಸ್ ಬುಕ್ಕಿಂಗ್​ನಲ್ಲೇ ಕೋಟಿ ಕೋಟಿ ಬಾಚಿತು ದರ್ಶನ್ ನಟನೆಯ ಕಾಟೇರ !

ಬೆಂಗಳೂರು : ದರ್ಶನ್ ನಟನೆಯ ಕಾಟೇರ ಸಿನಿಮಾ 29ರಂದು ರಾಜ್ಯಾದ್ಯಾಂತ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ. ಮಧ್ಯರಾತ್ರಿ 12ಗಂಟೆಗೆ ಹಲವೆಡೆ ಕಾಟೇರ ಮೊದಲ ಶೋ ಆರಂಭವಾಗಲಿದೆ.

ದರ್ಶನ್ ನಟನೆಯ ಕಾಟೇರ ಸಿನಿಮಾ 29ರಂದು ರಾಜ್ಯಾದ್ಯಾಂತ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ. ಮಧ್ಯರಾತ್ರಿ 12ಗಂಟೆಗೆ ಹಲವೆಡೆ ಕಾಟೇರ ಮೊದಲ ಶೋ ಆರಂಭವಾಗಲಿದೆ.

ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ. ವರ್ಷಾಂತ್ಯಕ್ಕೆ ಕಾಟೇರ ಸಿನಿಮಾ ತೆರೆಗೆ ಬರುತ್ತಿದ್ದು, ತರುಣ್ ಕಿಶೋರ್ ಸುದೀರ್ ನಿರ್ದೇಶನ ಮಾಡಿದ್ದಾರೆ. ರಾಬರ್ಟ್ ನಂತರ ಎರಡನೇ ಬಾರಿಗೆ ಈ ಜೋಡಿ ಕೈ ಜೋಡಿಸಿದ್ದು, ಸಿನಿಮಾ ಭಾರೀ ನಿರೀಕ್ಷೆ ಹುಟ್ಟಿಸಿದೆ.

ದರ್ಶನ್ ತೂಗುದೀಪ ಅಭಿನಯದ ಕಾಟೇರ ಸಿನಿಮಾ ಅಡ್ವಾನ್ಸ್ ಬುಕ್ಕಿಂಗ್​ಗೆ ಉತ್ತಮ ರೆಸ್ಪಾನ್ಸ್ ಬರುತ್ತಿದೆ. ವ್ಯವಸ್ಥೆಯ ವಿರುದ್ಧ ಹೋರಾಡುವ ನಾಯಕನಾಗಿ ಕಾಣಿಸಿಕೊಂಡಿರುವುದು ಟ್ರೈಲರ್​ನಲ್ಲಿ ಕಾಣಿಸಿದೆ.

ಇತಿಹಾಸದಲ್ಲಿ ಮೊದಲ ಬಾರಿಗೆ ಪ್ಯಾನ್ ಇಂಡಿಯಾ ಅಲ್ಲದ ಸಿನಿಮಾವೊಂದು ಅಡ್ವಾನ್ಸ್ ಬುಕ್ಕಿಂಗ್​ನಲ್ಲಿ ಇಂತಹ ದಾಖಲೆ ಮಾಡಿದೆ. ಬರೋಬ್ಬರಿ ಒಂದು ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಕಾಟೇರ ತಂಡ.

ಒಂದು ಕೋಟಿ ಹೆಚ್ಚು ಹಣ ಮಾಡಿರುವ ಕಅಟೇರ ತಂಡ ಇಲ್ಲಿಯವರೆಗೆ ಬರೋಬ್ಬರಿ 50 ಸಾವಿರಕ್ಕೂ ಹೆಚ್ಚು ಟಿಕೆಟ್ ಮಾರಾಟ ಮಾಡಿದೆ. ಈ ಬಗ್ಗೆಯೂ ಮಾಹಿತಿ ಹಂಚಿಕೊಳ್ಳಲಾಗಿದೆ. ಮಧ್ಯರಾತ್ರಿಯೇ ಕಾಟೇರನ ಅಬ್ಬರ ಜಾಸ್ತಿಯಅಗುತ್ತಿದ್ದು, ಈಗಾಗಲೇ ಬೆಳಗಿನ ಜಾವ 5 ಗಂಟೆ ಹಾಗೂ ಗಂಟೆಯಶೋಗಳು ಕೆಲವಡೆ ಸೋಲ್ಡೌಟ್ ಆಗಿವೆ.

Comments (0)

Your email address will not be published. Required fields are marked *

Back to top button