
ಬಳ್ಳಾರಿ : ಹೊಸ ಜಿಲ್ಲಾಧ್ಯಕ್ಷರ ನೇಮಕದ ಎಫೆಕ್ಟ್ನಿಂದಾಗಿ ಬಳ್ಳಾರಿ ನಗರದಲ್ಲಿರುವ ಕಾಂಗ್ರೆಸ್ ಕಚೇರಿಗೆ ಬೀಗ ಹಾಕಿರುವಂತಹ ಘಟನೆ ನಡೆದಿದೆ.
ಮೊನ್ನೆ ಅಷ್ಟೇ ಕೆಲವು ಜಿಲ್ಲೆಗಳಲ್ಲಿ ಹೊಸ ಜಿಲಾಧ್ಯಕ್ಷರನ್ನ ಕಾಂಗ್ರೆಸ್ ನೇಮಕ ಮಾಡಿತ್ತು. ಅದರಲ್ಲಿ ಬಳ್ಳಾರಿಯಿಂದ ಮೊಹಮ್ಮದ್ ರಫಿಕ್ ಅವರನ್ನ ಬದಲಾಯಿಸಿ, ಅಲ್ಲಂ ಪ್ರಶಾಂತ್ ಅವರನ್ನ ಜಿಲ್ಲಾಧ್ಯಕ್ಷರನ್ನಾಗಿ ಮಾಡಿತ್ತು. ಬಳ್ಳಾರಿಯಲ್ಲಿ ಕಾಂಗ್ರೆಸ್ಗೆ ಸ್ವಂತ ಕಚೇರಿ ಇಲ್ಲ. ಇಲ್ಲಿ ಅಧ್ಯಕ್ಷರಾದವರೇ ಕಚೇರಿ ಮಾಡಿಕೊಂಡು ಪಕ್ಷ ನಡೆಸೋದು ವಾಡಿಕೆಯಿದೆ.
ಕಳೆದ ಆರು ವರ್ಷದಿಂದ ಮಹಮ್ಮದ್ ರಫಿಕ್ ಬಾಡಿಗೆ ಕಟ್ಟುತ್ತಾ ಬಂದಿದ್ದರು. ಈಗ ಅಲ್ಲಂ ಪ್ರಶಾಂತ್ ಅಧ್ಯಕ್ಷರಾಗಿದ್ದಾರೆ, ಇದೇ ರೀತಿ ಬಾಡಿಗೆ ಕಟ್ಟಡದಲ್ಲಿ ಕಚೇರಿ ಮಾಡುತ್ತಾರಾ…? ಇಲ್ಲ ಇದೇ ಕಛೇರಿಯಲ್ಲಿ ಮುಂದುವರೆಯುತ್ತಾರಾ…? ಆದರೆ ಈಗ ಏಕಾಏಕಿ ಅಧ್ಯಕ್ಷರ ಬದಲಾವಣೆ ಹಿನ್ನೆಲೆ ಕಚೇರಿಗೆ ಮೊಹಮದ್ ರಫಿಕ್ ಬೀಗ ಹಾಕಿಸಿದ್ದಾರೆ.
ಇದರಲ್ಲಿ ಮೊಹಮದ ರಫಿಕ್ಗೆ ಅಸಮಾಧಾನ ಇದೆ, ಕೇಳಿದ್ದರೆ ನಾನೇ ರಾಜಿನಾಮೆ ಕೊಡ್ತಾ ಇದ್ದೆ, ಏಕಾಏಕಿ ಬದಲಾವಣೆ ಮಾಡಿದ್ದು ಸರಿಯಲ್ಲ, ಎಂದು ಅಲ್ಲಂ ಪ್ರಶಾಂತ್ ಹಿತೈಷಿಗಳು ಹಿರಿಯ ನಾಯಕರ ಬಳಿ ಅಸಮಾಧಾನ ತೋಡಿಕೊಂಡಿದ್ದಾರೆ.
ಹೊಸದಾಗಿ ನೇಮಕಗೊಂಡ ಅಧ್ಯಕ್ಷರಿಂದ ಹೊಸ ಕಚೇರಿಗಾಗಿ ಕಟ್ಟಡದ ಹುಡುಕಾಟ ನೆಡೆಸುತ್ತಿದ್ದಾರೆ. ಬಿಜೆಪಿ ಜೆಡಿಎಸ್ ಪಕ್ಷಗಳು ಬಳ್ಳಾರಿಯಲ್ಲಿ ಸ್ವಂತ ಕಚೇರಿ ಹೊಂದಿವೆ. ಆದರೆ ಸ್ವಾತಂತ್ರ್ಯ ಪೂರ್ವದಿಂದ ಇರೋ ಕಾಂಗ್ರೇಸ್ ಪಕ್ಷಕ್ಕೆ ಬಳ್ಳಾರಿಯಲ್ಲಿ ಕಚೇರಿ ಇಲ್ಲ. ಹಲವು ದಶಕಗಳ ಇತಿಹಾಸ ಇರೋ ಕಾಂಗ್ರೆಸ್ಗೆ ಸ್ವಂತ ಕಚೇರಿಯಿಲ್ಲ ಎಂಬುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು.




