ರಾಜಕೀಯಸುದ್ದಿ

‘ಗೋ ಬ್ಯಾಕ್’ ಶೆಟ್ಟರ್ ಅಭಿಯಾನ

ಬೆಳಗಾವಿ : ರಾಜ್ಯದಲ್ಲಿ ಲೋಕ ಸಮರ ಕಾವೇರುತ್ತಿದೆ. ಬೆಳಗಾವಿ ಲೋಕ ಸಭಾ ಕ್ಷೇತ್ರಕ್ಕೆ ಜಗದೀಶ್ ಶೆಟ್ಟರ್ ಹೆಸರು ಫೈನಲ್ ಆಗುತ್ತಿದ್ದಂತೆ ಸ್ವಪಕ್ಷದವರಿಂದಲೇ ವಿರೋಧತೆ ವ್ಯಕ್ತವಾಗುತ್ತಿದೆ. ಹೈಕಮಾಂಡ್ ಆಯ್ಕೆಯಲ್ಲಿ ಎಡವಿದೆ ಎಂಬ ಕೂಗು ಕೇಳಿ ಬಂದಿದೆ. ‘ಗೋ ಬ್ಯಾಕ್‌ ಶೆಟ್ಟರ್’ ಅಭಿಯಾನ ಸಾಮಾಜಿಕ ಜಾಲತಾಣದಲ್ಲಿ ಜೋರಾಗುತ್ತಿದೆ.

ಬೆಳಗಾವಿಗೆ ಹೊರಗಿನವರು ಬರುವುದು ಬೇಡ. ಸ್ಥಳೀಯ ಅಭ್ಯರ್ಥಿಗಳಿಗೆ ಟಿಕೆಟ್‌ ಕೊಡಬೇಕು ಎಂದು ಸ್ಥಳೀಯ ಬಿಜೆಪಿ ಕಾರ್ಯಕರ್ತರು ಹಾಗೂ ವಿಪಕ್ಷದ ಕಾರ್ಯಕರ್ತರು ಗೋ ಬ್ಯಾಗ್‌ ಶೆಟ್ಟರ್ ಅಭಿಯಾನ ಆರಂಭಿಸಿದ್ದಾರೆ.
ವಿಧಾನಸಭಾ ಚುನಾವಣೆ ವೇಳೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಜಗದೀಶ್ ಶೆಟ್ಟರ್ ಕಾಂಗ್ರೆಸ್‌ಗೆ ತೆರಳಿದ್ದರು. ಕಾಂಗ್ರೆಸ್‌ಗೆ ಹೋಗಿ ವಿಧಾನ ಪರಿಷತ್ ಸದಸ್ಯರಾಗಿದ್ದರು.

ಆದರೆ, ಲೋಕಸಭಾ ಚುನಾವಣೆ ವೇಳೆಗೆಪುನಃ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಬಂದಿದ್ದಾರೆ.ಈಗಾಗಲೇ ಹುಬ್ಬಳ್ಳಿ-ಧಾರವಾಡ ಲೋಕಸಭಾ ಚುನಾವಣೆಗೆ ಕೇಂದ್ರ ಸಚೊವ ಪ್ರಹ್ಲಾದ್ ಜೋಶಿ ಅವರಿಗೆ ಟಿಕೆಟ್ ಘೋಷಣೆಯಾಗಿದೆ. ಆದರೆ, ಲೋಕಸಭಾ ಟಿಕೆಟ್‌ ಯಾವ ಕ್ಷೇತ್ರದಿಂದ ನೀಡಬೇಕು ಎಂಬ ಪ್ರಶ್ನೆ ಬಂದಿದ್ದು, ಬೆಳಗಾವಿ ಕ್ಷೇತ್ರದ ಟಿಕೆಟ್ ಕೊಡುವುದಾಗಿ ಹೈಕಮಾಂಡ್‌ ತಿಳಿಸಿದೆ.

 

Comments (0)

Your email address will not be published. Required fields are marked *

Back to top button