Top News

ಜಗ್ಗಿ ವಾಸುದೇವ್ ಬದುಕಿದ್ದೆ ಪವಾಡ …

ವಿಶ್ವ ಪ್ರಸಿದ್ದ ಆಧ್ಯಾತ್ಮಿಕ ಗುರು ಇಶಾ ಫೌಂಡೇಶನ್‌ನ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ನವದೆಹಲಿಯಲ್ಲಿ ಮೆದುಳಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲಾಗಿರುವ ಜಗ್ಗಿ ವಾಸುದೇವ್ ಅವರಿಗೆ ಮಾರ್ಚ್ 17ರಂದು ಮೆದುಳಿನಲ್ಲಿ ಭಾರೀ ಊತ ಮತ್ತು ರಕ್ತಸ್ರಾವ ಉಂಟಾಗಿತ್ತು.ವೈದ್ಯರ ತಪಾಸಣೆ ವೇಳೆ ಸದ್ಗುರು ಮೆದುಳಿನಲ್ಲಿ ಭಾರೀ ರಕ್ತಸ್ರಾವ ಪತ್ತೆಯಾಗಿದೆ. ಇದರ ಜೊತೆಗೆ ಸದ್ಗುರು ಅವರು ನಿರಂತರ ವಾಂತಿ ಮತ್ತು ತೀವ್ರ ತಲೆನೋವಿನಿಂದ ಬಳಲುತ್ತಿದ್ದರು.

ತಮಗೆ ಮೆದುಳಿನ ಶಸ್ತ್ರಚಿಕಿತ್ಸೆ ನಡೆದಿರುವ ಕುರಿತು ಇಶಾ ಫೌಂಡೇಶನ್ ತನ್ನ‌ ಎಕ್ಸ್‌ನಲ್ಲಿ ಖಾತೆಯಲ್ಲಿಸದ್ಗರು ಮಾಹಿತಿ ನೀಡಿದ್ದಾರೆ.ನಾನು ಸದ್ಯ ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿದ್ದೇನೆ. ಇಲ್ಲಿಯ ನ್ಯೂರೋ ಸರ್ಜನ್ ನನ್ನ ತಲೆಯಲ್ಲಿ ಏನು ಹುಡುಕಲು ಹೋಗಿದ್ದರು. ಆದರೆ ಅವರಿಗೆ ಏನು ಸಿಗಲಿಲ್ಲ. ಕೊನೆಗೆ ತಲೆಗೆ ಬ್ಯಾಂಡೇಜ್ ಹಾಕಿದ್ದು, ಮೆದುಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಸದ್ಗುರು ಜಗ್ಗಿ ವಾಸುದೇವ್ ಗುರೂಜಿ ಹೇಳಿದ್ದಾರೆ.
ಇದೇ ವೇಳೆ ಸದ್ಗುರು ಅವರಿಗೆ ಚಿಕಿತ್ಸೆ ನೀಡುತ್ತಿರುವ ಅಪೋಲೋ ಆಸ್ತ್ರತ್ರೆ ವೈದ್ಯ ವಿನಿತ್ ಸೂರಿ ಹೇಳುವ ಪ್ರಕಾರ ಮೆದುಳಿನ ಎರಡು ಭಾಗದಲ್ಲಿ ರಕ್ತಸ್ರಾವ ಉಂಟಾಗಿತ್ತು. ಶಸ್ತ್ರಚಿಕಿತ್ಸೆ ನಂತರ ಸದ್ಗುರು ಆರೋಗ್ಯ ಚೇತರಿಕೆ ಕಂಡಿದೆ.ಮೆದಳಿನ ಎರಡು ಕಡೆ ರಕ್ತಸಾವ್ರವಾಗಿರೋದು ಎಮ್ ಆರ್ ಐ ಸ್ಕ್ಯಾನ್ ನಲ್ಲಿ ಪತ್ತೆಯಾಗಿತ್ತು.ಕೂಡಲೇ ಶಸ್ತ್ರ ಚಿಕಿತ್ಸೆ ಕೈಗೊಳ್ಳಲಾಗಿದೆ.ಇದೀಗ ಯಾವುದೇ ಅಪಾಯವಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.

Comments (0)

Your email address will not be published. Required fields are marked *

Back to top button