ಕ್ರೈಂ ಸ್ಟೋರಿರಾಜ್ಯಸುದ್ದಿ

ಅನೈತಿಕ ಸಂಬಂಧ ಹಿನ್ನಲೆ ಜೋಡಿ ಕೊಲೆ!

ವಿಜಯಪುರ : ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಮಾರಡಗಿ ತಾಂಡಾ ಎಂಬ ಗ್ರಾಮದ ನಿವಾಸಿಗಳಾದ ಕಲ್ಲಪ್ಪ ಕುಂಬಾರ (35) ಪಾರ್ವತಿ ತಳವಾರ (38) ವಿವಾಹಿತೆ ಪಾರ್ವತಿ ಹಾಗೂ ಕಲ್ಲಪ್ಪ ಮಧ್ಯೆ ಅಕ್ರಮ ಸಂಬಂಧವಿತ್ತು ಎಂದು ಹೇಳಲಾಗಿದೆ.
ಮಾರಡಗಿ ತಾಂಡಾದ ಬಳಿ ಜಮೀನಿನಲ್ಲಿ ಪಾರ್ವತಿ ಹಾಗೂ ಕಲ್ಲಪ್ಪ ಒಟ್ಟಿಗೆ ಇದ್ದಾಗ ಕೊಲೆ ಮಾಡಲಾಗಿದೆ. ಕೊಲೆಯ ಬಳಿಕ ಕೊಲೆಗಾರರು ಶವದ ಮೇಲೆ ಮುಳ್ಳುಕಂಟಿ ಹಾಕಿದ್ದಾರೆ. ಪಾರ್ವತಿ ಮನೆಯ ಕಡೆಯವರು ಕೊಲೆ ಮಾಡಿರೋ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ನಿಡಗುಂದಿ ಪೊಲೀಸ್ ಠಾಣೆಯ ಸಿಪಿಐ ಶರಣಗೌಡ ಹಾಗೂ ಸಿಬ್ಬಂದಿ ಭೇಟಿ ಮಾಡಿ ಪರಿಶೀಲನೆ ಯನ್ನ ನಡೆಸಿ, ಕೊಲೆಗಾರರ ಪತ್ತೆಗೆ ಮುಂದಾಗಿದ್ದಾರೆ. ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳದಲ್ಲಿ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

Comments (0)

Your email address will not be published. Required fields are marked *

Back to top button