KRS Dam: ಕೆಆರ್ಎಸ್ನಿಂದ ತಮಿಳುನಾಡಿಗೆ ನೀರು.. ನಿಜನಾ? ವಾಸ್ತವಾಂಶ ಏನು?

ಕೆಆರ್ಎಸ್ ಜಲಾಶಯದಿಂದ ಶನಿವಾರದಿಂದ 4595 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ. ಜಲಕ್ಷಾಮದ ನಡುವೆಯೂ ತಮಿಳುನಾಡಿಗೆ ಈ ನೀರನ್ನು ಹರಿಸಲಾಗುತ್ತಿದೆ ಎಂಬ ಆರೋಪವನ್ನು ಬಿಜೆಪಿ ಮಾಡುತ್ತಿದೆ. ಆದರೆ, ಈ ಆರೋಪದಲ್ಲಿ ಸತ್ಯಾಂಶ ಇಲ್ಲ ಎನ್ನಲಾಗುತ್ತಿದೆ.
ಕಾವೇರಿ ನೀರಾವರಿ ನಿಗಮದ ಎಂಜಿನಿಯರ್ಗಳು ಹೇಳೋದೇನು?
ಕಾವೇರಿ ನೀರಾವರಿ ನಿಗಮದ (Cauvery Neeravari Nigama)ಎಂಜಿನಿಯರ್ಗಳ ಪ್ರಕಾರ, ಕೆಆರ್ಎಸ್ನಿಂದ ತಮಿಳುನಾಡಿಗೆ ನೀರು ಹರಿಸಿಲ್ಲ. ಬೆಂಗಳೂರಿಗೆ ಕುಡಿಯುವ ನೀರು (Bengaluru water supply)ಪೂರೈಸುವ ಶಿವ ಬ್ಯಾರೇಜ್ (Shiva balancing Reservoir)ಗೆ ಈ ನೀರನ್ನು ಹರಿಸಲಾಗಿದೆ. ಶಿವ ಬ್ಯಾರೇಜ್ನಲ್ಲಿ ನೀರಿನ ಸಂಗ್ರಹ ಮಟ್ಟ 34 ಇಂಚ್ಗೆ ಕುಸಿದಿತ್ತು. ಇದು ಬೆಂಗಳೂರಿಗೆ ನೀರು ಪೂರೈಸುವ ವಾಟರ್ ಪಂಪಿಂಗ್ ಮೇಲೆ ಪರಿಣಾಮ ಬೀರಿತ್ತು. ಹೀಗಾಗಿ ಶಿವ ಬ್ಯಾರೇಜ್ ತುಂಬಿಸಲು ಕೆಆರ್ಎಸ್ನಿಂದ ನೀರು ಬಿಡುಗಡೆ ಮಾಡಲಾಗಿದೆ
ತಮಿಳುನಾಡು ಮೂಲಲಗಳು ಹೇಳೋದೇನು?
ತಮಿಳುನಾಡಿಗೆ ಕರ್ನಾಟಕ ನೀರು ಹರಿಸಿಲ್ಲ. ಬೆಂಗಳೂರಿಗೆ ಕುಡಿಯುವ ನೀರು ಪೂರೈಸಲು ಕೆಆರ್ಎಸ್ನಿಂದ (KRS Dam)ನೀರು ಹರಿಸಲಾಗಿದೆ. ಈ ನೀರು ಶಿವ ಬ್ಯಾರೇಜ್ ತಲುಪುತ್ತದೆ. ಅಲ್ಲಿಂದ ಬೆಂಗಳೂರಿಗೆ ನೀರು ಹರಿಸಲಾಗುತ್ತದೆ. ಮೆಟ್ಟೂರು ಜಲಾಶಯದ (Mettur Dam) ಒಳಹರಿವು 67 ಕ್ಯೂಸೆಕ್ ಇದೆ. ಇದು ಕಳೆದ ಮೂರು ವರ್ಷಗಳಲ್ಲೇ ಕನಿಷ್ಠ. ಇದು ಸಹಜ ಹರಿಯುವಿಕೆಯ ಪ್ರಮಾಣಕ್ಕಿಂತಲೂ ಕಡಿಮೆ. ಕಾವೇರಿ ಕೊಳ್ಳದ ಜೀವರಾಶಿಗಳಿಗಾಗಿ ನೀರು ಹರಿಸಬೇಕು ಎಂದು ಕರ್ನಾಟಕವನ್ನು ಕೋರುತ್ತಿದ್ದೇವೆ.
ಅನುಮಾನ ಏನು?
ಪರಿಸರ ಪ್ರೇಮಿ, ಹವ್ಯಾಸಿ ಹವಾಮಾನ ಪರಿವೀಕ್ಷಕ ಮೈಸೂರಿನ ರವಿಕೀರ್ತಿಗೌಡ ಪ್ರಕಾರ, ಕೆಆರ್ಎಸ್ ಮತ್ತು ಕಬಿನಿಯಿಂದ 6,500 ಕ್ಯೂಸೆಕ್ಗೂ ಹೆಚ್ಚು ನೀರನ್ನು ಹೊರಗೆ ಹರಿಸಲಾಗುತ್ತಿದೆ. ಇದನ್ನು ನೋಡಿದರೆ ಬೆಂಗಳೂರಿನ ಜೊತೆಗೂ ತಮಿಳುನಾಡಿಗೂ ನೀರು ಹರಿಸಿದಂತೆ ಕಅಣುತ್ತಿದೆ. ಆದರೆ,ಈ ವಿಚಾರದಲ್ಲಿ ಯಾವುದೇ ಸ್ಪಷ್ಟತೆ ಇಲ್ಲ. ಸತ್ಯಾಂಶ ಏನು ಎನ್ನುವುದು ಗೊತ್ತಾಗಬೇಕಾದರೇ, ಮಾರ್ಚ್ 12 ಮತ್ತು 13ರಂದು ಮೆಟ್ಟೂರು ಜಲಾಶಯದ ಒಳಹರಿವು ಎಷ್ಟಿದೆ ಎಂಬುದು ಗೊತ್ತಾಗುವವರೆಗೂ ಕಾಯಬೇಲಾಗುತ್ತದೆ.




