Wednesday, December 10, 2025
26.8 C
Bengaluru
Google search engine
LIVE
ಮನೆರಾಜಕೀಯನವೆಂಬರ್ ಹತ್ತಿರ ಬಂತು ಕ್ರಾಂತಿ ಆಗೇ ಬಿಡುತ್ತಾ

ನವೆಂಬರ್ ಹತ್ತಿರ ಬಂತು ಕ್ರಾಂತಿ ಆಗೇ ಬಿಡುತ್ತಾ

ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ಜೋರಾಗಿದ್ದು ಕೈ ಬಂಗಲೆಯಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ.

ಒಂದ್ ಕಡೆ ಸಿಎಂ ಸಿದ್ದರಾಮಯ್ಯರ ಬೆಂಬಲಿಗರ ಮಾತುಗಳನ್ನ ಕೇಳ್ತಾ ಇದ್ರೆ, ಯಾವುದೇ ಕಾರಣಕ್ಕೂ ಹೈಕಮಾಂಡ್ ಸಿಎಂ ಸಿದ್ದರಾಮಯ್ಯರನ್ನ ಬದಲಾವಣೆ ಮಾಡದು ಎಂಬಂತೆ ಭಾಸವಾಗ್ತಿದೆ.ಇನ್ನು ಡಿಕೆ ಶಿವಕುಮಾರ್ ರವರ ಇತ್ತೀಚಿಗಿನ ರಾಜಕೀಯ ನಡವಳಿಕೆ ನೋಡ್ತಿದ್ರೆ ಹೈಕಮಾಂಡ್ ಕೂಡ ಡಿಕೆಯವರನ್ನ ಕನ್ವೆನ್ಸ್ ಮಾಡಿದಂತೆ ಕಾಣುತ್ತಿದೆ.

ಒಟ್ಟಾರೆ ರಾಜಕೀಯ ಪಡಸಾಲೆಯಲ್ಲಿ ಸಿದ್ದರಾಮಯ್ಯನವರೇ ಮುಂದೈದು ವರ್ಷ ಸಿಎಂ ಆಗಿ ಮುಂದುವರೆಯಲಿದ್ದಾರೆ ಎನ್ನುವ ಸಂದೇಶ ಸಿಕ್ಕಂತೆ ಕಾಣುತ್ತಿದೆ. ಇನ್ನು ಇತ್ತ ಡಿಕೆ ಬೆಂಬಲಿಗರು ಪ್ರಯತ್ನವನ್ನ ಕೈ ಬಿಡದೆ ಒಂದಲ್ಲ ಒಂದು ರೀತಿಯಲ್ಲಿ ಡಿಕೆ ಪರ ಬ್ಯಾಟ್ ಬೀಸುತ್ತಲೇ ಇದ್ದಾರೆ, ವಾರಕ್ಕೊಬ್ಬರು ಪ್ರತ್ಯಕ್ಷಗೊಂಡು ಡಿಕೆ ಸಿಎಂ ಆಗಲಿ ಎಂಬ ಭರವಸೆಯನ್ನ ವ್ಯಕ್ತಪಡಿಸುತ್ತಲೇ ಇದ್ದಾರೆ, ಮೊದಲಿಗೆ ರಾಮನಗರದ ಶಾಸಕ ಇಕ್ಬಾಲ್ ಅನಂತರ ಕುಣಿಗಲ್ ಶಾಸಕರು ಅದಾದ ಮೇಲೆ ಶಿವರಾಮೇಗೌಡರು ಒಬ್ಬರ ಹಿಂದೆ ಒಬ್ಬರಂತೆ ಡಿಕೆ ಪರ ಧ್ವನಿಗೂಡಿಸುತ್ತಲೇ ಇದ್ದಾರೆ .ಒಟ್ಟಾರೆ ನವೆಂಬರ್ ತಿಂಗಳಲ್ಲಿ ಕ್ರಾಂತಿ ನಡೆದೇ ಬಿಡುತ್ತಾ ಕಾದು ನೋಡೋಣ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments