ಜಿಲ್ಲೆರಾಜಕೀಯ

ಲೋಕಸಭಾ ಎಲೆಕ್ಷನ್​ಗೆ ಡಾ. ಸಿಎನ್ ಮಂಜುನಾಥ್ ನಿಲ್ತಾರಾ..?

ಬೆಂಗಳೂರು : ಜಯದೇವ ಆಸ್ಪತ್ರೆಯ ಮಾಜಿ ನಿರ್ದೇಶಕ ಡಾ. ಸಿ.ಎನ್ ಮಂಜುನಾಥ್ ಗೆ ಈ ಬಾರಿಯ ಲೋಕಸಭಾ ಎಲೆಕ್ಷನ್ ನಲ್ಲಿ ಸ್ಪರ್ಧಿಸುವಂತೆ ಒತ್ತಾಯ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿಯಿಂದ ಡಾ. ಸಿಎನ್ ಮಂಜುನಾಥ್ ಗೆ ಒತ್ತಾಯ ದೇಶದಲ್ಲಿ ಈ ಬಾರಿ ಲೋಕಸಭಾ ಚುನಾವಣೆ ಹತ್ತಿರ ಬರ್ತಿದೆ ಈ ಸಂದರ್ಭದಲ್ಲಿ ಎಂತಹವರನ್ನು ಸಂಸತ್ ಗೆ ಕಳಿಸಬೇಕೆಂದು ನಾವು ತೀರ್ಮಾನ ಮಾಡಬೇಕು ಇದೀಗ ತಾನೇ ಜಯದೇವ ಆಸ್ಪತ್ರೆಯ ನಿರ್ದೇಶಕರಾಗಿ ಹೃದ್ರೋಗ ತಜ್ಞರಾಗಿ ಸೇವೆ ಸಲ್ಲಿಸಿ ಡಾ. ಸಿಎನ್ ಮಂಜುನಾಥ್ ನಿವೃತ್ತರಾಗಿದ್ದಾರೆ.

ಜಯದೇವ ಆಸ್ಪತ್ರೆಯನ್ನು ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ್ದಾರೆ. ದೇಶದ ಹಿತದೃಷ್ಟಿಯಿಂದ ಸೂಕ್ತವಾದ ಸಲಹೆಗಳನ್ನು ಪ್ರಧಾನ ಮಂತ್ರಿಗಳಿಗೆ ಮತ್ತು ಸಂಸದರಿಗೆ ನೀಡಲು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸುತ್ತದೆ ಜೆಡಿಎಸ್, ಕಾಂಗ್ರೆಸ್, ಅಥವಾ ಬಿಜೆಪಿ ಯಾವ ಪಕ್ಷದಿಂದ ಆದ್ರು ನೀವು ಸ್ಪರ್ಧಿಸಿ ನಿಮ್ಮ ಸೇವೆ ದೇಶಕ್ಕೆ ಅಗತ್ಯವಾಗಿದೆ.

ಬೆಂಗಳೂರು ಉತ್ತರಕ್ಕೆ ಬನ್ನಿ, ಅಥವಾ ರಾಜ್ಯದ ಯಾವುದಾದರೂ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಕರ್ನಾಟಕ ರಕ್ಷಣಾ ವೇದಿಕೆ, ಎಲ್ಲಾ ಕನ್ನಡಪರ ಸಂಘಟನೆಗಳು ಹಾಗೂ ಕನ್ನಡಿಗರು ನಿಮಗಾಗಿ ಕೆಲಸ ಮಾಡ್ತಿವಿ , ಅತ್ಯಧಿಕ ಮಾತುಗಳಿಂದ ಗೆಲ್ಲಿಸಿಕೊಂಡು ಬರ್ತಿವಿ,  ನೀವು ನಿವೃತ್ತಿಯಾಗಿ ಮನೆಯಲ್ಲಿರುವುದು ರಾಜ್ಯಕ್ಕೆ ಶೋಭೆಯಲ್ಲ,  ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಿ, ನಿಮ್ಮ ಸೇವೆ ನಾಡಿಗೆ ಅವಶ್ಯಕವಾಗಿದೆ.

Comments (0)

Your email address will not be published. Required fields are marked *

Back to top button