ಯಶ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್ – ಆಗಸ್ಟ್ 21ರಿಂದ ಅಡ್ವಾನ್ಸ್ ಬುಕಿಂಗ್ ಶುರು!
Good news for Yash fans – advance booking starts on August 21!

ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ʻಟಾಕ್ಸಿಕ್ʼ ಆಗಸ್ಟ್ 26ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಗೆ ಬರಲು ಸಜ್ಜಾಗಿದೆ. ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರವು ಈ ವರ್ಷದ ಅತ್ಯಂತ ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದ್ದು, ಯಶ್ ಅವರ ಹೊಸ ಸಿನಿಮಾ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಸಿನಿಮಾದ ಮೇಲಿರುವ ಭಾರಿ ನಿರೀಕ್ಷೆಯಿಂದಾಗಿ ಭಾರತದಾದ್ಯಂತ ಎಲ್ಲಾ ಭಾಷೆಗಳಲ್ಲಿ ನಾಳೆಯಿಂದ (ಆ.21) ಅಧಿಕೃತವಾಗಿ ಟಿಕೆಟ್ ಬುಕಿಂಗ್ ಆರಂಭವಾಗಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಿದೆ. ಈ ಮುಂಗಡ ಮಾರಾಟವು ಗಲ್ಲಾಪೆಟ್ಟಿಗೆಯಲ್ಲಿ ಹೊಸ ದಾಖಲೆಗಳನ್ನು ಬರೆಯುವ ಮುನ್ಸೂಚನೆ ನೀಡಿದೆ.
ಆಗಸ್ಟ್ 25ರ ಸಾಯಂಕಾಲವೇ ಪ್ರೀಮಿಯರ್ ಪ್ರದರ್ಶನಗಳು ಆರಂಭವಾಗಲಿವೆಯೇ ಎನ್ನುವ ಕುತೂಹಲ ಎಲ್ಲರಲ್ಲೂ ಮೂಡಿದೆ. ಒಂದು ವೇಳೆ ಸಂಜೆಯೇ ಪ್ರೀಮಿಯರ್ ಶೋಗಳು ನಡೆದರೆ ಮೊದಲ ದಿನವೇ ಕೋಟ್ಯಂತರ ರೂಪಾಯಿ ಹಣ ಹರಿದು ಬರಲಿದೆ. ಈ ಪ್ರೀಮಿಯರ್ ಪ್ರದರ್ಶನಗಳು ಸಿನಿಮಾದ ಕಲೆಕ್ಷನ್‌ಗೆ ಭಾರಿ ಪ್ಲಸ್ ಪಾಯಿಂಟ್ ಆಗಲಿವೆ.
ಈ ಚಿತ್ರದಲ್ಲಿ ಯಶ್ ಜೊತೆಗೆ ದಕ್ಷಿಣ ಭಾರತ ಹಾಗೂ ಬಾಲಿವುಡ್‌ನ ಖ್ಯಾತ ನಟಿಯರಾದ ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ಹುಮಾ ಖುರೇಷಿ ಹಾಗೂ ತಾರಾ ಸುತಾರಿಯಾ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಒಟ್ಟಾರೆಯಾಗಿ ರಾಕಿ ಭಾಯ್ ಅಬ್ಬರದಿಂದ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಏಳುವುದು ಖಚಿತವಾಗಿದ್ದು, ಥಿಯೇಟರ್‌ಗಳು ಹೌಸ್‌ಫುಲ್ ಪ್ರದರ್ಶನದತ್ತ ಮುಖ ಮಾಡಿವೆ.




