ಬೆಂಗಳೂರಿನ ಗೌರಿ ಜೊತೆ ‘ಮಿಸ್ಟರ್ ಪರ್ಫೆಕ್ಷನಿಸ್ಟ್’ ಆಮಿರ್ ಖಾನ್ 3ನೇ ಮದುವೆ!
'Mr Perfectionist' Aamir Khan's 3rd marriage with Gauri in Bangalore!

ಮುಂಬೈ: ಬಾಲಿವುಡ್‌ನ ‘ಮಿಸ್ಟರ್ ಪರ್ಫೆಕ್ಷನಿಸ್ಟ್’ ಎಂದೇ ಖ್ಯಾತರಾಗಿರುವ ನಟ ಆಮಿರ್ ಖಾನ್ ಅವರು ಗೌರಿ ಸ್ಪ್ರ್ಯಾಟ್ ಜೊತೆ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗೌರಿ ಸ್ಪ್ರ್ಯಾಟ್ ಬೆಂಗಳೂರು ಮೂಲದವರಾಗಿದ್ದು, ಸುಮಾರು ಎರಡು ವರ್ಷಗಳಿಂದ ಈ ಜೋಡಿ ಪರಸ್ಪರ ಪ್ರೀತಿಸುತ್ತಿದ್ದರು.
ಇಂದು ಈ ಜೋಡಿ ಮುಂಬೈನ ಬಾಂದ್ರಾದಲ್ಲಿರುವ ಆಮಿರ್ ಖಾನ್ ಅವರ ನಿವಾಸದಲ್ಲಿ ಕುಟುಂಬದ ಸದಸ್ಯರು ಹಾಗೂ ಅತ್ಯಂತ ಆಪ್ತರ ಸಮ್ಮುಖದಲ್ಲಿ ಅತ್ಯಂತ ಸರಳವಾಗಿ ವಿವಾಹವಾಗಿದ್ದಾರೆ. ಆಪ್ತ ಸ್ನೇಹಿತರು ಹಾಗೂ ಸಿನಿಮಾ ಕ್ಷೇತ್ರದ ಕೆಲ ಗಣ್ಯರು ಮಾತ್ರ ಈ ಶುಭ ಕಾರ್ಯಕ್ಕೆ ಸಾಕ್ಷಿಯಾಗಿದ್ದರು.
ಈ ಸ್ಟಾರ್ ಜೋಡಿಯ ಮದುವೆ ಸಮಾರಂಭದಲ್ಲಿ ಕೇವಲ 150 ಮಂದಿ ಆಹ್ವಾನಿತರು ಮಾತ್ರ ಭಾಗಿಯಾಗಿದ್ದರು. ಸಾಂಪ್ರದಾಯಿಕ ವಿಧಿವಿಧಾನಗಳ ಬಳಿಕ, ಆಮಿರ್ ಖಾನ್ ಮತ್ತು ಗೌರಿ ಸ್ಪ್ರ್ಯಾಟ್ ವಿವಾಹ ನೋಂದಣಿಗೆ ಅಗತ್ಯವಿರುವ ದಾಖಲೆಗಳಿಗೆ ಸಹಿ ಹಾಕುವ ಮೂಲಕ ತಮ್ಮ ಮದುವೆಯನ್ನು ಕಾನೂನುಬದ್ಧವಾಗಿ ನೋಂದಾಯಿಸಿಕೊಂಡಿದ್ದಾರೆ.
ಸದ್ಯ ಆಮಿರ್ ಖಾನ್ ಹಾಗೂ ಗೌರಿ ಸ್ಪ್ರ್ಯಾಟ್ ಅವರ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ಹೊಸ ಜೋಡಿಗೆ ಶುಭ ಹಾರೈಸುತ್ತಿದ್ದಾರೆ.
25 ವರ್ಷಗಳ ಪರಿಚಯ, 2 ವರ್ಷಗಳ ಪ್ರೀತಿ
ಆಮಿರ್ ಖಾನ್ ಮತ್ತು ಗೌರಿ ಸ್ಪ್ರ್ಯಾಟ್ ಅವರಿಗೆ ಕಳೆದ 25 ವರ್ಷಗಳಿಂದ ಪರಸ್ಪರ ಪರಿಚಯವಿತ್ತು. ಆದರೆ, ಕಳೆದ ಎರಡು ವರ್ಷಗಳ ಹಿಂದಷ್ಟೇ ಇವರ ಸ್ನೇಹವು ಪ್ರೀತಿಗೆ ತಿರುಗಿತ್ತು. ಕಳೆದ ವರ್ಷ ತಮ್ಮ 60ನೇ ಹುಟ್ಟುಹಬ್ಬದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಆಮಿರ್ ಖಾನ್ ಅವರು ಗೌರಿ ಅವರನ್ನು ಮೊದಲ ಬಾರಿಗೆ ಸಾರ್ವಜನಿಕವಾಗಿ ಪರಿಚಯಿಸಿದ್ದರು.
ಮಕ್ಕಳ ಸಮ್ಮುಖದಲ್ಲಿ ಮೂರನೇ ಮದುವೆ
ಈ ಮದುವೆ ಸಮಾರಂಭದಲ್ಲಿ ಆಮಿರ್ ಖಾನ್ ಅವರ ಮೂವರು ಮಕ್ಕಳಾದ ಜುನೈದ್, ಇರಾ ಹಾಗೂ ಆಜಾದ್ ಭಾಗವಹಿಸಿ ತಂದೆಯ ಹೊಸ ಜೀವನಕ್ಕೆ ಶುಭ ಹಾರೈಸಿದ್ದಾರೆ. ಇವರ ಜೊತೆಗೆ ಗೌರಿ ಸ್ಪ್ರ್ಯಾಟ್ ಅವರ ಆರು ವರ್ಷದ ಮಗ ಕೂಡ ಸಮಾರಂಭದಲ್ಲಿ ಉಪಸ್ಥಿತರಿದ್ದನು.




