ನಾಳೆ ಬಾಲಿವುಡ್ ನಟ ಅಮೀರ್ ಖಾನ್ 3ನೇ ಮದುವೆ – ಯಾರಿಗೆಲ್ಲಾ ಆಹ್ವಾನ?
Bollywood Actor Aamir Khan's 3rd Wedding Tomorrow - Who's Invited?

ಮುಂಬೈ : ಬಾಲಿವುಡ್ನ ‘ಮಿಸ್ಟರ್ ಪರ್ಫೆಕ್ಟ್ಷನಿಸ್ಟ್’ ಅಮೀರ್ ಖಾನ್ ಮತ್ತೆ ಸುದ್ದಿಯಲ್ಲಿದ್ದಾರೆ. ಬಾಲಿವುಡ್ ನಟ ಅಮೀರ್ ಖಾನ್ ನಾಳೆ ಮುಂಬೈನಲ್ಲಿ ಮೂರನೇ ಮದುವೆಯಾಗಲಿದ್ದಾರೆ. ಅಮೀರ್ ಖಾನ್ ಅವರು ಗೌರಿ ಸ್ಪ್ರಾಟ್ ಎಂಬುವವರ ಜೊತೆ ನಾಳೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಮುಂಬೈನಲ್ಲಿರುವ ಅಮೀರ್ ಖಾನ್ ಅವರ ನಿವಾಸದಲ್ಲೇ ಅತ್ಯಂತ ಸರಳವಾಗಿ ವಿವಾಹ ಮಹೋತ್ಸವ ನೆರವೇರಲಿದೆ. ತೀರಾ ಅದ್ದೂರಿಯಾಗಿ ಮದುವೆಯಾಗುವ ಬದಲು, ಅತ್ಯಂತ ಆಪ್ತರ ಸಮ್ಮುಖದಲ್ಲಿ ಸರಳವಾಗಿ ಸಪ್ತಪದಿ ತುಳಿಯಲು ಈ ಜೋಡಿ ನಿರ್ಧರಿಸಿದೆ.
ವಿಶೇಷ ಸಮಾರಂಭಕ್ಕೆ ಕೇವಲ ಕುಟುಂಬದ ಸದಸ್ಯರು, ಅತ್ಯಂತ ಆತ್ಮೀಯ ಸ್ನೇಹಿತರು ಹಾಗೂ ಸಂಬಂಧಿಗಳಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಅಮೀರ್ ಅವರ ಮುಂಬೈ ಮನೆಯಲ್ಲೇ ವಿವಾಹದ ಶಾಸ್ತ್ರಗಳು ನಡೆಯಲಿದ್ದು, ಈಗಾಗಲೇ ಮದುವೆಯ ಸಿದ್ಧತೆಗಳು ಬಿರುಸಿನಿಂದ ಸಾಗಿವೆ.
ಅಮೀರ್ ಖಾನ್ 1986ರಲ್ಲಿ ರೀನಾ ದತ್ತಾ ಅವರನ್ನು ಮೊದಲ ಬಾರಿಗೆ ವಿವಾಹವಾಗಿದ್ದರು. ಆದರೆ, 16 ವರ್ಷಗಳ ದಾಂಪತ್ಯ ಜೀವನದ ನಂತರ, ಮನಸ್ತಾಪಗಳ ಹಿನ್ನೆಲೆಯಲ್ಲಿ 2002ರಲ್ಲಿ ಈ ಜೋಡಿ ವಿಚ್ಛೇದನ ಪಡೆದುಕೊಂಡಿದ್ದರು. ಬಳಿಕ ಅಮೀರ್ ಖಾನ್ 2005ರಲ್ಲಿ ಕಿರಣ್ ರಾವ್ ಅವರನ್ನು ಎರಡನೇ ಮದುವೆಯಾದರು. ಈ ದಾಂಪತ್ಯ ಕೂಡ ಸುದೀರ್ಘ 16 ವರ್ಷಗಳ ಕಾಲ ನಡೆಯಿತು. ಆದರೆ, 2021ರಲ್ಲಿ ಅಮೀರ್ ಮತ್ತು ಕಿರಣ್ ರಾವ್ ಅಧಿಕೃತವಾಗಿ ವಿಚ್ಛೇದನ ಪಡೆದರು.
ಇದೀಗ ವಿಚ್ಛೇದನದ ಐದು ವರ್ಷಗಳ ಬಳಿಕ ಅಮೀರ್ ಖಾನ್ ತಮ್ಮ ಜೀವನದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಲು ಸಜ್ಜಾಗಿದ್ದು, ನಾಳೆ ಗೌರಿ ಸ್ಪ್ರಾಟ್ ಅವರ ಕೈಹಿಡಿಯಲಿದ್ದಾರೆ.




