ಕ್ರೈಂ ಸ್ಟೋರಿಜಿಲ್ಲೆ

ಅನ್ಯಕೋಮಿನ ಯುವಕನ ಪ್ರೀತಿಸಿದ್ದಕ್ಕೆ ತಂಗಿ ಮತ್ತು ತಾಯಿಯನ್ನು ಕೆರೆಗೆ ತಳ್ಳಿದ ರಕ್ಕಸ

ವರದಿ : ಅಶೋಕ್ , ಮೈಸೂರು 

ಮೈಸೂರು ; ಅನ್ಯಕೋಮಿನ ಯುವಕನನ್ನ ಪ್ರೀತಿಸಿದ್ದಕ್ಕೆ ಕೋಪಗೊಂಡ ಸಹೋದರ ತಂಗಿ ಹಾಗೂ ತನ್ನ ತಾಯಿಯನ್ನು ಕೆರೆಗೆ ತಳ್ಳಿ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ಮೈಸೂರಿನಲ್ಲಿ ನಡೆದಿದೆ.

ಹುಣಸೂರು ತಾಲೂಕಿನ ಮರೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಧನುಶ್ರೀ (19), ತಾಯಿ ಅನಿತಾ (43) ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದವರು. ಮಗ ನಿತಿನ್​​ನಿಂದ ಈ ಕೃತ್ಯ ನಡೆದಿದೆ. ಸಹೋದರಿ ಅನ್ಯ ಕೋಮಿನ ಯುವಕನನ್ನು ಪ್ರೀತಿಸುತ್ತಿದ್ದಳು. ಈ ವಿಷಯ ಸಹೋದರನಿಗೆ ಗೊತ್ತಾಗಿ ತಿಳಿ ಹೇಳಿದ್ದನು.

ಇಬ್ಬರ ನಡುವೆಯು ವೈಮನಸ್ಸು ಮೂಡಿತ್ತು. ತಂಗಿ ಮತ್ತು ತಾಯಿಯನ್ನು ಬೈಕ್​ ಮೂಲಕ ಕೆರೆ ಬಳಿಗೆ ಕರೆದುಕೊಂಡು ಹೋಗಿದ್ದಾನೆ. ಆ ಬಳಿಕ ಮೊದಲು ಕೆರೆಯಲ್ಲಿ ತಂಗಿಯನ್ನು ತಳ್ಳಿದ್ದಾನೆ. ಇದರಿಂದ ಗಾಬರಿಗೊಂಡ ತಾಯಿ ತಕ್ಷಣ ಮಗಳನ್ನು ರಕ್ಷಣೆಗೆ ಮುಂದಾಗಿದ್ದಾಳೆ. ಈ ವೇಳೆ ತಾಯಿಯನ್ನು ಕೂಡ ಕೆರೆಗೆ ತಳ್ಳಿದ್ದಾನೆ.

ಕೆರೆ ನೀರಿನಲ್ಲಿ ಬಿದ್ದ ತಾಯಿ, ಮಗಳು ಇಬ್ಬರು ಮೃತಪಟ್ಟಿದ್ದಾರೆ. ಈ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನ ಹೊರ ತೆಗೆದಿದ್ದಾರೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Comments (0)

Your email address will not be published. Required fields are marked *

Back to top button