ಕ್ರೈಂ ಸ್ಟೋರಿಜಿಲ್ಲೆ

ಹೂಡಿಕೆ ಮಾಡಿದ್ರೆ 19% ಬಡ್ಡಿ ಅಂದ್ರು: ದುಡ್ಡು ಪಡೆದು ತೀಡಿದ್ರು ಉಂಡೆ ನಾಮ

ಬೆಂಗಳೂರು :  ಹೆಚ್ಚಿನ ಲಾಭ ಕೊಡುವ ಹೆಸರಿನಲ್ಲಿ ಹಣ ಹೂಡಿಕೆ ಮಾಡಿಸಿ ವಂಚಿಸಿದ ಗ್ಯಾಂಗ್ ಅರೆಸ್ಟ್ ಆಗಿದೆ. ಕಾಟನ್ ಪೇಟೆ ಪೊಲೀಸ್ ಠಾಣೆ ಯಲ್ಲಿ ದಾಖಲಾಗಿದ್ದ ವಂಚನೆ ದೂರಿನಡಿ ಆರೋಪಿಗಳನ್ನ ಬಂಧಿಸಲಾಗಿದೆ. ಪ್ರತಾಪ್ ರೆಡ್ಡಿ, ಒಬಳೇಶ್, ಮಣಿ ಮತ್ತು ಗೋಪಿ ಬಂಧಿತ ಅರೋಪಿಗಳಾಗಿದ್ದು ಕೆ.ಆರ್.ಪುರದಲ್ಲಿ ಎಸ್ ಫೈ ಎಸ್ ಎಂದು ಕಂಪನಿ ಮಾಡಿಕೊಂಡಿದ್ದರು. ಆಂಧ್ರ ಮತ್ತು ಕರ್ನಾಟಕದ ಜನರಿಂದ ಹೆಚ್ಚಿನ ಬಡ್ಡಿ ಆಸೆ ತೋರಿಸಿ ಹೂಡಿಕೆ ಮಾಡಿಸಿಕೊಂಡಿದ್ದರು.

ಒಂದು ಲಕ್ಷ ಹೂಡಿಕೆ ಮಾಡಿದ್ರೆ ತಿಂಗಳಿಗೆ ಹತ್ತೊಬ್ಬಂತು ಪರ್ಸೆಂಟ್ ಲಾಭ ಕೊಡುವುದಾಗಿ ನಂಬಿಸಿ ಹಣ ದೋಚಿದ್ದ ಖದೀಮರು ಅರೆಸ್ಟ್ ಆಗಿದ್ದಾರೆ. ಅಂಧ್ರದ ಸಂದಡಿ ನರಸಿಂಹ ರೆಡ್ಡಿ ಎಂಬುವವರು ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ ಕಾಟನ್ ಪೇಟೆ ಪೊಲೀಸ್ರು ನಾಲ್ವರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದಲ್ಲಿ ನಾಲ್ಕು ಅಕೌಂಟ್ ಮೂಲಕ ಸುಮಾರು ಮೂವತ್ತು ಕೋಟಿ ಅವ್ಯವಹಾರ ನಡೆದಿದೆ ಎಂಬುದು ಪತ್ತೆಯಾಗಿದೆ.

ಇನ್ನು ಆರೋಪಿಗಳು ಮಾಸ್ಟರ್ ಪ್ಲ್ಯಾನ್ ವೊಂದನ್ನ ಮಾಡಿಕೊಂಡು ಹಣ ಹೂಡಿಕೆ ಮಾಡಿದ್ರೆ, 19ಪರ್ಸೆಂಟ್ ಬಡ್ಡಿ ಕೊಡೋದಾಗಿ ತಿಳಿಸಿದ್ರು. ಅಲ್ಲದೇ ಪ್ರಾರಂಭದಲ್ಲಿ ಹಣ ವಾಪಸ್ ಕೂಡ ಕೊಟ್ಟಿದ್ರು. ನಂತ್ರ ಹಣ ಕೊಡದೆ ಹರಿಯಾಣದಲ್ಲಿ ಹೂಡಿಕೆ ಮಾಡಿದ್ದೀವಿ ಅಂತ ಸಬೂಬು ಹೇಳ ತೊಡಗಿದ್ರು. ಇನ್ನು ಹೊರಗೆ ಇದ್ರೆ, ಜನ ಬಿಡೋದಿಲ್ಲ ಅಂತೇಳಿ ಆರೋಪಿಗಳ ಪೈಕಿ ಪ್ರತಾಪ್ ಎಂಬಾತ ಒಂದು 307 ಕೇಸ್ ಮಾಡಿ ಜೈಲಿಗೆ ಹೋಗಿದ್ದ.. ಸಧ್ಯ ಪ್ರತಾಪ್ ನನ್ನ ಕಾಟನ್ ಪೇಟೆ ಪೊಲೀಸ್ರು ಬಾಡಿ ವಾರೆಂಟ್ ಮೇಲೆ ಕರೆದುಕೊಂಡು ಬಂದಿದ್ದಾರೆ. ಪ್ರಕರಣದಲ್ಲಿ ವೆಂಕಟೇಶ್ ಎಂಬಾತನನ್ನ ವಶಕ್ಕೆ ಪಡೆದು ಅಕ್ರಮ ಬಂಧನದಲ್ಲಿಟ್ಟಿದ್ದ ಕಾರಣ ಪೊಲೀಸ್ರ ಮೇಲೆ ಅಕ್ರಮ ಬಂಧನ ಕೇಸು ದಾಖಲಾಗುವ ಸಾಧ್ಯತೆ ಇದೆ.

ಲಾಡ್ಜ್ ವೊಂದರಲ್ಲಿ ವೆಂಕಟೇಶ್ ವಿಚಾರಣೆ ಮಾಡಿದ್ದೇ ತಪ್ಪಾಗಿದೆ. ಲಾಡ್ಜ್ ಮಾಲೀಕ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಪೊಲೀಸರು ಅಮಾಯಕನನ್ನು ಲಾಡ್ಜ್ ನಲ್ಲಿ ಅಕ್ರಮ ಬಂಧನದಲ್ಲಿಟ್ಟು ವಿಚಾರಣೆ ಸಂಭಂಧ ಹಲ್ಲೆ ಮಾಡಿದ್ದ ಪ್ರಕರಣ ಕೂಡ ದಾಖಲಾಗುವ ಸಾಧ್ಯತೆ ಇದೆ. ಸಂಬಂಧ ಕಾಟನ್ ಪೇಟೆ ಪಿಎಸ್ಐ ವಿರುದ್ದವೂ ಲಾಡ್ಜ್ ಮ್ಯಾನೇಜರ್ ಪ್ರಕಾಶ್ ದೂರು ನೀಡಿದ್ದಾರೆ. ಕಾಟನ್ ಪೇಟೆ ಸಬ್ ಇನ್ಸ್’ಪೆಕ್ಟರ್ ಸಂತೋಷ್ ಗೌಡ ಸಿಬ್ಬಂದಿಗಳಾದ ಧ್ಯಾನ್ ಪ್ರಕಾಶ್ ಹಾಗೂ ಸಚಿನ್ ವಿರುದ್ದ ಪೊಲೀಸ್ ಕಮಿಷನರ್ ಗೆ ಕೋಣನಕುಂಟೆ ನಿವಾಸಿ ವೆಂಕಟ್ ದೂರು ನೀಡಿದ್ದಾರೆ.

 

Comments (0)

Your email address will not be published. Required fields are marked *

Back to top button