ಕನ್ನಡದ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿ ಮೃದು ಸ್ವಭಾವದ ‘ಪ್ರಿಯ’ ಪಾತ್ರದ ಮೂಲಕ ಕನ್ನಡಿಗರ ಮನಗೆದ್ದ ರುಕ್ಮಿಣಿ ವಸಂತ್, ಈಗ ಭಾರತೀಯ ಚಿತ್ರರಂಗದ ಹೊಸ ಸೆನ್ಸೇಷನ್ ಆಗಿ ಹೊರಹೊಮ್ಮಿದ್ದಾರೆ. ಕೇವಲ ಸೌಂದರ್ಯವನ್ನಷ್ಟೇ ನಂಬಿ ಬರುವ ನಟಿಯರ ನಡುವೆ, ರುಕ್ಮಿಣಿ ತಮ್ಮ ಅದ್ಭುತ ನಟನಾ ಕೌಶಲದಿಂದಲೇ ಇಂದು ನ್ಯಾಷನಲ್ ಕ್ರಶ್ ಪಟ್ಟಕ್ಕೇರಿದ್ದಾರೆ. ಕರಾವಳಿ ಮೂಲದ ಈ ಬೆಡಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ಎಲ್ಲಾ ಲಕ್ಷಣಗಳನ್ನು ತೋರುತ್ತಿದ್ದು, ಭಿನ್ನ ಪಾತ್ರಗಳ ಮೂಲಕ ಸಿನಿಪ್ರಿಯರನ್ನು ಸೆಳೆಯುತ್ತಿದ್ದಾರೆ.

ಇತ್ತೀಚಿನ ‘ಕಾಂತಾರ-1’ ಚಿತ್ರದಲ್ಲಿ ‘ಕನಕವತಿ’ ಎಂಬ ನೆಗೆಟಿವ್ ಶೇಡ್ ಪಾತ್ರದಲ್ಲಿ ಇವರು ತೋರಿದ ಗತ್ತು ಮತ್ತು ಅಭಿನಯ, ಮೃಣಾಲ್ ಠಾಕೂರ್ ಅಂತಹ ಘಟಾನುಘಟಿ ನಟಿಯರಿಗೇ ಪೈಪೋಟಿ ನೀಡುವಂತಿದೆ. ಮೃಣಾಲ್ ಅವರ ಬದಲಿಗೆ ರುಕ್ಮಿಣಿ ‘ಮದ್ರಾಸಿ’ ಚಿತ್ರಕ್ಕೆ ಆಯ್ಕೆಯಾಗಿರುವುದು ಇವರ ಚಿತ್ರರಂಗದ ಡಿಮ್ಯಾಂಡ್‌ಗೆ ಸಾಕ್ಷಿಯಾಗಿದೆ. ಇದೀಗ ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದಲ್ಲಿ ‘ಮೆಲ್ಲಿಸಾ’ ಎಂಬ ಪವರ್‌ಫುಲ್ ಪಾತ್ರದ ಮೂಲಕ ಇಡೀ ಭಾರತೀಯ ಚಿತ್ರರಂಗವನ್ನೇ ಆಳಲು ಈ ಕರಾವಳಿ ಬೆಡಗಿ ಸಜ್ಜಾಗಿದ್ದಾರೆ.

ರುಕ್ಮಿಣಿ ಅವರ ಫಿಸಿಕ್ ಮತ್ತು ಪರ್ಫಾರ್ಮೆನ್ಸ್ ನೋಡಿ ಅಭಿಮಾನಿಗಳು ಇವರನ್ನು ಸ್ಟಾರ್ ನಟಿ ದೀಪಿಕಾ ಪಡುಕೋಣೆ ಅವರಿಗೆ ಹೋಲಿಸುತ್ತಿದ್ದಾರೆ. 2026ರ ಪ್ಯಾನ್ ಇಂಡಿಯಾ ಕ್ವೀನ್ ಇವರೇ ಎಂದು ಈಗಾಗಲೇ ಫ್ಯಾನ್ಸ್ ಫಿಕ್ಸ್ ಆಗಿದ್ದಾರೆ. ಒಂದು ಕಡೆ ರಶ್ಮಿಕಾ ಮಂದಣ್ಣ ಅವರು ವೈಯಕ್ತಿಕ ಜೀವನದತ್ತ ಹೆಜ್ಜೆ ಇಡುತ್ತಿದ್ದರೆ, ಮತ್ತೊಂದೆಡೆ ರುಕ್ಮಿಣಿ ವಸಂತ್ ಭಾರತೀಯ ಚಿತ್ರರಂಗವನ್ನೇ ಆಳುವ ಭರವಸೆಯ ನಟಿಯಾಗಿ ಉದಯಿಸುತ್ತಿದ್ದಾರೆ. ರುಕ್ಮಿಣಿ ಅವರ ಈ ಅದ್ಭುತ ಜರ್ನಿ ಬಗ್ಗೆ ನಿಮಗೇನನ್ನಿಸುತ್ತೆ?


