ಜನವರಿ 22 ಶ್ರೀರಾಮನ ಪ್ರಾಣ ಪ್ರತಿಷ್ಠೆ: ಆ ದಿನವೇ ಹೆರಿಗೆಗಾಗಿ ಕಾಯುತ್ತಿದ್ದಾರೆ ತಾಯಂದಿರು!

ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆ ಸಮಾರಂಭ ನಡೆಯಲಿರುವ ಹಿನ್ನೆಲೆಯಲ್ಲಿ ಜನವರಿ 22ರಂದು ತಮ್ಮ ಮಗುವಿನ ಜನನವನ್ನು ನಿಗದಿಪಡಿಸುವಂತೆ ವೈದ್ಯರಿಗೆ ದೇಶದ ಹಲವಾರು ಗರ್ಭಿಣಿಯರು ಮತ್ತು ಅವರ ಕುಟುಂಬ ಸದಸ್ಯರು ಮನವಿ ಮಾಡಿದ್ದಾರೆ.

ದೇಶದ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ಆಸ್ಪತ್ರೆ ವೈದ್ಯರ ಬಳಿ ಹೆರಿಗೆ ಆ ದಿನವೇ ಆಗಬೇಕು ಅಂತ ಕಾಯುತ್ತಿರೋರು ವೈದ್ಯರು ಬೇಡ ಅಂದ್ರು ಕೇಳದೆ ಒತ್ತಾಯ ಮಾಡುತ್ತಿದ್ದಾರೆ. ಅನೇಕ ಗರ್ಭಿಣಿ ತಾಯಂದಿರು ಮತ್ತು ಅವರ ಕುಟುಂಬ ಸದಸ್ಯರು ತಮ್ಮ ಮಕ್ಕಳನ್ನು ಜನವರಿ 22 ರಂದು ಜನಿಸಬೇಕೆಂದು ಒತ್ತಾಯಿಸುತ್ತಿದ್ದರು, ಇದು ದೇಶದಲ್ಲಿ ಮಹತ್ವದ ಮತ್ತು ಮಂಗಳಕರ ದಿನವಾಗಿದೆ. “ಜನವರಿ 22 ರಂದು ವಿಶೇಷವಾಗಿ ಹೆರಿಗೆಗಾಗಿ ನಾನು ಪ್ರತಿದಿನ ಸುಮಾರು 9 ರಿಂದ 10 ಕುಟುಂಬಗಳಿಂದ ವಿನಂತಿಗಳನ್ನು ಸ್ವೀಕರಿಸುತ್ತೇನೆ. ಸಾಮಾನ್ಯ ಹೆರಿಗೆಯನ್ನು ಖಾತರಿಪಡಿಸುವುದು ಅಸಾಧ್ಯವಾದರೂ, ಶಸ್ತ್ರಚಿಕಿತ್ಸೆಯ ಅಗತ್ಯವಿರುವವರಿಗೆ ನಾವು ದಿನಾಂಕಗಳನ್ನು ಸಮಂಜಸವಾದ ಕಾಲಮಿತಿಯೊಳಗೆ ಸರಿಹೊಂದಿಸಬಹುದು ಎಂದು ವಿವರಿಸಿದ್ದೇವೆ” ಎಂದು ವೈದ್ಯರು ಹೇಳುತ್ತಿದ್ದಾರೆ.

“ಕೆಲವೊಮ್ಮೆ ಕುಟುಂಬ ಸದಸ್ಯರು ಹೀಗೆ ಮಾಡುವುದರಿಂದ ತಾಯಿ ಮತ್ತು ಮಗುವಿನ ಪ್ರಾಣಕ್ಕೂ ಸಂಚಕಾರ ಬರಬಹುದು ಎಂಬ ಎಚ್ಚರಿಕೆಯನ್ನೂ ವೈದ್ಯರು ಕೊಡುತ್ತಿದ್ದಾರೆ. ಹೀಗಾಗಲೇ ಜನವರಿ 22ನೇ ತಾರೀಖಿಗೆ ಮಗುವಿಗೆ ಜನ್ಮ ಕೊಡಲು ಆನೇಕ ಗರ್ಭೀಣಿ ತಾಯಂದಿರು ಕಾಯುತ್ತಿದ್ದಾರೆ. ಅದೇ ದಿನಾಂಕ ನಿಗದಿಯಾಗಿದ್ರೆ ಓಕೆ..ಅದಕ್ಕೂ ಮುನ್ನವೇ ಇಲ್ಲ ನಂತ್ರದ ದಿನಾಂಕಗಳಿದ್ದು, ಅದೇ ದಿನ ಹೆರಿಗೆ ಮಾಡಿಸಿಕೊಂಡ್ರೆ, ಮಗುವಿನ ಆರೋಗ್ಯ ಮತ್ತು ತಾಯಿ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಭಗವಾನ್ ರಾಮನು ಶೌರ್ಯ, ಸಮಗ್ರತೆ ಮತ್ತು ವಿಧೇಯತೆಯ ಸಂಕೇತವಾಗಿದೆ; ಆದ್ದರಿಂದ, ದೇವಾಲಯದ ‘ಪ್ರಾಣ ಪ್ರತಿಷ್ಠಾ’ದ ದಿನದಂದು ಜನಿಸಿದ ಶಿಶುಗಳು ಸಹ ಅದೇ ಗುಣಗಳನ್ನು ಹೊಂದಿರುತ್ತಾರೆ” ಎಂಬುದು ಗರ್ಭೀಣಿ ತಾಯಂದಿರ ಮತ್ತು ಕುಟುಂಬದವರು ನಂಬಿಕೆ.




