ಆರೋಗ್ಯವಾಗಿರಬೇಕು ಅಂತ ಸಿರಿಧಾನ್ಯ ತಿನ್ನೋ ಪ್ಲಾನ್ ಇದೆಯಾ?
ನಮ್ಮ ಪೂರ್ವಜರು ಯಾಕೆ ಅಷ್ಟು ಗಟ್ಟಿಯಾಗಿದ್ರು ಗೊತ್ತಾ? ಅವರು ತಿನ್ನುತ್ತಿದ್ದ ಫುಡ್ ಹಾಗಿತ್ತು! ಆದ್ರೆ ನಾವು ಇವತ್ತು ಬರೀ ಪಾಲೀಶ್ ಮಾಡಿದ ಅಕ್ಕಿ, ಮೈದಾ ಅಂತ ಬಿದ್ದು ನಮ್ಮ ಆರೋಗ್ಯನ ನಾವೇ ಹಾಳು ಮಾಡ್ಕೊಳ್ತಿದ್ದೀವಿ. ಅದಕ್ಕೆ ನೋಡಿ ಇವತ್ತು ಚಿಕ್ಕ ವಯಸ್ಸಲ್ಲೇ ಶುಗರ್, ಬಿಪಿ ಅಂತ ಆಸ್ಪತ್ರೆ ಅಲೆದಾಡೋ ಸ್ಥಿತಿ ಬಂದಿದೆ. ಈ ಎಲ್ಲದಕ್ಕೂ ಒಂದೇ ಮದ್ದು ಅಂದ್ರೆ ಅದು ನಮ್ಮ ಮಣ್ಣಿನ ಗುಣ ಇರೋ ‘ಸಿರಿಧಾನ್ಯಗಳು’. ರಾಗಿ, ನವಣೆ, ಸಾಮೆ, ಬರಗು.. ಇವುಗಳನ್ನ ಸುಮ್ನೆ ಧಾನ್ಯ ಅಂತ ಅನ್ಕೋಬೇಡಿ, ಇವು ಒಂತರಾ ನೈಸರ್ಗಿಕ ಶಕ್ತಿ ಇದ್ದಂಗೆ!

ಎಲ್ಲೆಡೆ ಸಿರಿಧಾನ್ಯಗಳ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ. ನಮ್ಮ ಪೂರ್ವಜರ ಶಕ್ತಿಯ ರಹಸ್ಯವಾಗಿದ್ದ ಈ ಧಾನ್ಯಗಳು ಇಂದು ಮತ್ತೆ ನಮ್ಮ ತಟ್ಟೆಗೆ ಮರಳಿ ಬರುತ್ತಿವೆ. ಆದರೆ, ಯಾವುದೇ ಒಂದು ಆಹಾರ ಪದ್ಧತಿಯನ್ನು ಕುರುಡಾಗಿ ಅನುಸರಿಸುವ ಮೊದಲು ಅದರ ಪ್ಲಸ್ ಮತ್ತು ಮೈನಸ್ ಎರಡನ್ನೂ ತಿಳಿದುಕೊಳ್ಳುವುದು ಅತಿ ಅಗತ್ಯ
ಈ ರಾಗಿ ಅಥವಾ ನವಣೆಯಲ್ಲಿ ಫೈಬರ್ ಮತ್ತೆ ಪ್ರೋಟೀನ್ ಸಕ್ಕತ್ತಾಗಿ ಇರುತ್ತೆ. ಇದನ್ನ ತಿಂದ್ರೆ ಹೊಟ್ಟೆ ಬೇಗ ಹಸಿಯಲ್ಲ, ವೇಯ್ಟ್ ಲಾಸ್ ಮಾಡ್ಬೇಕು ಅನ್ನೋವ್ರಿಗಂತೂ ಇದು ಬೆಸ್ಟ್ ಆಪ್ಷನ್. ಬರೀ ಅನ್ನ ಸಾಂಬಾರ್ ತಿನ್ನೋ ಬದ್ಲು, ವಾರದಲ್ಲಿ ಒಂದು ಮೂರು ದಿನ ಈ ಸಿರಿಧಾನ್ಯಗಳನ್ನ ಟ್ರೈ ಮಾಡಿ ನೋಡಿ. ನಿಮ್ಮ ಬಾಡಿ ಫುಲ್ ಆಕ್ಟಿವ್ ಆಗುತ್ತೆ, ಆಮೇಲೆ ಮಧುಮೇಹದಂತ ಕಾಯಿಲೆಗಳೂ ಕೂಡ ನಿಮ್ಮ ಹತ್ರ ಬರೋದಿಲ್ಲ . ಸಿರಿಧಾನ್ಯ ಅಂದ್ರೆ ಬರೀ ಮುದ್ದೆ ಅಷ್ಟೇ ಅಲ್ಲ ಕಣ್ರಿ, ಇವತ್ತು ಇದ್ರಲ್ಲೇ ದೋಸೆ, ಪಾಯಸ, ಉಪ್ಪಿಟ್ಟು ಅಂತ ಏನ್ ಬೇಕಾದ್ರೂ ರುಚಿಯಾಗಿ ಮಾಡ್ಕೋಬಹುದು.

ಯಾವುದನ್ನೇ ಆದರೂ ಅತಿಯಾಗಿ ಸೇವಿಸುವುದು ಅಥವಾ ಸರಿಯಾದ ಕ್ರಮವಿಲ್ಲದೆ ಬಳಸುವುದು ಅಷ್ಟೊಂದು ಸಮಂಜಸವಲ್ಲ. ಪ್ರತಿಯೊಬ್ಬರ ದೇಹದ ಸ್ಥಿತಿ ವಿಭಿನ್ನವಾಗಿರುವುದರಿಂದ, ಹೊಸ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮುನ್ನ ಕೆಲವು ಮುನ್ನೆಚ್ಚರಿಕೆಗಳನ್ನು ವಹಿಸುವುದು ಅಗತ್ಯ. ಅದರಲ್ಲೂ ವಿಶೇಷವಾಗಿ ಥೈರಾಯ್ಡ್ ಸಮಸ್ಯೆ ಇರುವವರು ಅಥವಾ ಕಿಡ್ನಿ ಸಂಬಂಧಿತ ಕಾಯಿಲೆ ಇರುವವರು ಸಿರಿಧಾನ್ಯಗಳನ್ನು ಸೇವಿಸುವ ಮುನ್ನ ತುಸು ಹೆಚ್ಚು ಎಚ್ಚರಿಕೆ ವಹಿಸಬೇಕಾಗುತ್ತದೆ. ಏಕೆಂದರೆ ಕೆಲವು ಧಾನ್ಯಗಳು ಎಲ್ಲರಿಗೂ ಒಂದೇ ರೀತಿ ಒಗ್ಗುವುದಿಲ್ಲ. ಆದ್ದರಿಂದ, ನಿಮ್ಮ ದೈನಂದಿನ ಆಹಾರ ಕ್ರಮವನ್ನು ಸಂಪೂರ್ಣವಾಗಿ ಬದಲಾಯಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಉತ್ತಮ.
ನಮ್ಮ ರೈತರು ಬೆಳೆಯೋ ಈ ಧಾನ್ಯಗಳನ್ನ ನಾವೇ ಬೆಳೆಸಿ, ನಾವೇ ತಿಂದ್ರೆ ಆರೋಗ್ಯನೂ ಸೂಪರ್, ಆರ್ಥಿಕತೆಯೂ ಸೂಪರ್. ಸೋ, ಇವತ್ತೇ ನಿಮ್ಮ ಮನೆ ಅಡುಗೆ ಮನೇಲಿ ಸಿರಿಧಾನ್ಯಗಳಿಗೆ ಜಾಗ ಕೊಡಿ. ಆರೋಗ್ಯವಾಗಿದ್ರೆ ತಾನೇ ಲೈಫ್ ಎಂಜಾಯ್ ಮಾಡೋಕ್ ಆಗೋದು.


