Top Newsಜಿಲ್ಲೆರಾಜ್ಯಸುದ್ದಿ

ಮಣ್ಣಲ್ಲಿ ಮಣ್ಣಾದ ಕಾನ್ಫಿಡೆಂಟ್ ದೊರೆ ಸಿ.ಜೆ. ರಾಯ್; ನೆಚ್ಚಿನ ಸ್ಥಳದಲ್ಲೇ ಅಂತ್ಯಕ್ರಿಯೆ

ಪ್ರಖ್ಯಾತ ಉದ್ಯಮಿ ಹಾಗೂ ಕಾನ್ಫಿಡೆಂಟ್ ಗ್ರೂಪ್‌ನ ಸಂಸ್ಥಾಪಕ ಸಿ.ಜೆ. ರಾಯ್ ಅವರ ಅಂತ್ಯಕ್ರಿಯೆಯು ಅವರ ಆಶಯದಂತೆಯೇ ಬೆಂಗಳೂರಿನ ಅವರ ನೆಚ್ಚಿನ ಸ್ಥಳವಾದ ‘ಕಾನ್ಫಿಡೆಂಟ್ ಕ್ಯಾಸ್ಕ್ಯೇಡ್’ನ ರಾಜ್ ಕುಮಾರ್ ಪಾರ್ಕ್‌ನಲ್ಲಿ ಸಕಲ ವಿಧಿವಿಧಾನಗಳೊಂದಿಗೆ ನೆರವೇರಿತು. ಕ್ರಿಶ್ಚಿಯನ್ ಸಂಪ್ರದಾಯದಂತೆ ನಡೆದ ಈ ಅಂತಿಮಯಾತ್ರೆಯಲ್ಲಿ ಕುಟುಂಬಸ್ಥರು, ಆತ್ಮೀಯರು ಮತ್ತು ಉದ್ಯಮ ಕ್ಷೇತ್ರದ ಗಣ್ಯರು ಭಾಗವಹಿಸಿ ಕಣ್ಣೀರ ವಿದಾಯ ಹೇಳಿದರು.

ತಮ್ಮ ವಿಭಿನ್ನ ಜೀವನಶೈಲಿ ಮತ್ತು ಸದಾ ಲವಲವಿಕೆಯಿಂದ ಇರುತ್ತಿದ್ದ ಸಿ.ಜೆ. ರಾಯ್ ಅವರ ಅಂತಿಮ ಕ್ಷಣಗಳು ಕೂಡ ಅವರು ಇಷ್ಟಪಡುತ್ತಿದ್ದ ರೀತಿಯಲ್ಲೇ ವೈಭವಪೂರ್ಣವಾಗಿದ್ದವು. ಅವರ ಪಾರ್ಥಿವ ಶರೀರಕ್ಕೆ ಅವರು ಮೆಚ್ಚುತ್ತಿದ್ದ ಬ್ಲೇಜರ್, ಶೂ ಮತ್ತು ಸನ್ ಗ್ಲಾಸ್ ಧರಿಸಿ ಅಲಂಕರಿಸಲಾಗಿತ್ತು. ವಿಶೇಷವಾಗಿ, ಅವರ ನೆಚ್ಚಿನ ಐಷಾರಾಮಿ ಕಾರಾದ ‘ರೋಲ್ಸ್ ರಾಯ್ಸ್’ನ ಕೀಯನ್ನು ಅವರ ಜೊತೆಗಿಟ್ಟು ಅಂತ್ಯಕ್ರಿಯೆ ಮಾಡಿದ್ದು ಕುಟುಂಬಸ್ಥರ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಯಿತು. ಈ ಮೂಲಕ ‘ಕಾನ್ಫಿಡೆಂಟ್ ದೊರೆ’ ಎಂದೇ ಪ್ರಸಿದ್ಧರಾಗಿದ್ದ ಅವರು ತಮ್ಮ ನೆಚ್ಚಿನ ನೆನಪುಗಳೊಂದಿಗೆ ಮಣ್ಣಲ್ಲಿ ಮಣ್ಣಾದರು.

Comments (0)

Your email address will not be published. Required fields are marked *

Back to top button