
ಮೈಸೂರು: ಮೈಸೂರು ದಸರಾಗೆ ಅಧಿಕೃತವಾಗಿ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ ಅವರು ಯದುವಂಶದ ಪ್ರಮೋದಾ ದೇವಿ ಒಡೆಯರ್ ಅವರಿಗೆ ನೀಡಿದ್ದಾರೆ. ಸೆ.22 ರಂದು ಪ್ರಾರಂಭವಾಗಲಿರುವ ನಾಡಹಬ್ಬ ದಸರಾಗೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ಗೆ ಯದುವಂಶದ ಪ್ರಮೋದಾ ದೇವಿ ಒಡೆಯರ್ ಅವರಿಗೆ ಗೌರವ ಧನ ನೀಡಿ ಆಹ್ವಾನ ನೀಡಿದ್ದಾರೆ.
ಈಗಾಗಲೇ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2025ಕ್ಕೆ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್ ಸಿ ಮಹದೇವಪ್ಪ ಅವರು ಯದುವಂಶದ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರನ್ನು ಅಧಿಕೃತವಾಗಿ ಆಹ್ವಾನಿಸಿದ್ದಾರೆ. ಗೌರವ ಧನ ನೀಡಿ ಬರಮಾಡಿಕೊಂಡಿದ್ದಾರೆ. ದಸರಾ ಮಹೋತ್ಸವಕ್ಕೆ ಯದುವಂಶದ ಸಹಕಾರವನ್ನು ಸಚಿವರು ಸ್ವಾಗತಿಸಿದ್ದಾರೆ. ಈ ಬಾರಿ ಯಾವುದೇ ಗೊಂದಲವಿಲ್ಲದೆ, ಯಶಸ್ವಿಯಾಗಿ ದಸರಾ ನಡೆಸಲು ಜಿಲ್ಲಾಡಳಿತ ಸಜ್ಜಾಗಿದೆ.
ದಸರಾಗೆ ಯಾವತ್ತೂ ಯದುವಂಶದಿಂದ ಕಿರಿಕಿರಿ ಆಗಿಲ್ಲ. ಪ್ರತಿ ದಸರಾಗೂ ಯದುವಂಶದ ಸಹಕಾರ ಇರುತ್ತದೆ. ಈ ಬಾರಿಯ ದಸರಾಗೂ ಉತ್ತಮ ಸಹಕಾರ ನೀಡುತ್ತೇವೆ ಎಂದು ಪ್ರಮೋದಾ ದೇವಿ ಒಡೆಯರ್ ಹೇಳಿದ್ದಾರೆ. ಕಳೆದ ಬಾರಿ ಆದ ಒಂದೆರಡು ಗೊಂದಲಗಳ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ಪ್ರಮೋದಾ ದೇವಿ ಒಡೆಯರ್ ತಂದಿದ್ದಾರೆ. ಕೆಲ ಸಲಹೆ ಕೂಡ ಕೊಟ್ಟಿದ್ದು ಅವರ ಸಲಹೆ ಸ್ವೀಕರಿಸಿದ್ದೇವೆ ಎಂದು ಸಚಿವ ಹೆಚ್.ಸಿ ಮಹದೇವಪ್ಪ ಹೇಳಿದ್ದಾರೆ.




