ಬೆಂಗಳೂರು: ಪಾಕಿಸ್ತಾನದವರು ಎಂದು ಪ್ರತಿಬಾರಿಯೂ ಬಿಜೆಪಿಯವರು ನಮ್ಮನ್ನು ಬೈತಾರೆ. ಆದರೆ, ಈಗ ಪಾಕಿಸ್ತಾನ್ ಜೊತೆ ಪಂದ್ಯ ಹೇಗೆ ಆಡೋಕೆ ಬಿಡ್ತಿರಾ ಎಂದು ಶಾಸಕ ಪ್ರದೀಪ್ ಈಶ್ವರ್ ಪ್ರಶ್ನೆ ಮಾಡಿದ್ದಾರೆ..
ಇಂಡೋ ಪಾಕಿಸ್ತಾನದ ನಡುವಿನ ಏಷ್ಯಾ ಕಪ್ ಕ್ರಿಕೆಟ್ ಪಂದ್ಯದ ಬಗ್ಗೆ ಶಾಸಕ ಪ್ರದೀಪ್ ಈಶ್ವರ್ ಮಾತನಾಡಿದ್ದು, ನಾನು ಇಂಡಿಯಾ ಪಾಕಿಸ್ತಾನ್ ಮಧ್ಯದ ಪಂದ್ಯದ ಬಾಯ್ಕಾಟ್ ಮಾಡ್ತಿನಿ ಮ್ಯಾಚ್ ನೋಡಲ್ಲ ಕೇಂದ್ರದ ಪ್ರಧಾನಿ ಮೋದಿ, ಅಮಿತ್ ಶಾ ರಾಜ್ಯದ ವಿಜಯೇಂದ್ರ ಆರ್. ಅಶೋಕ್, ಸೋಮಣ್ಣ ಪ್ರಹ್ಲಾದ್ ಜೋಶಿ ಸಾಹೇಬರನ್ನ ಕೇಳ್ತಿನಿ. ಪಹಲ್ಗಾಮ್ ದಾಳಿಯ ನಂತರ ಹೇಗೆ ನೀವು ಪಂದ್ಯ ಆಡೋಕೆ ಬಿಡ್ತೀರಿ. ಪ್ರಾಣ ಕಳೆದುಕೊಂಡ ಅಮಾಯಕರ ಜೀವಕ್ಕೆ, ಹುತಾತ್ಮ ಸೈನಿಕರಿಗೆ ಬೆಲೆಯಿಲ್ವ ಎಂದು ಕಿಡಿಕಾರಿದರು.
ಕೇಂದ್ರ ಸರ್ಕಾರಕ್ಕೆ ಇನ್ನೂಸಮಯವಿದೆ. ಮಾನಮರ್ಯಾದೆ ಇದ್ದರೆ, ಪಾಕಿಸ್ತಾನದ ಜೊತೆಗಿನ ಮ್ಯಾಚ್ ಕ್ಯಾನ್ಸಲ್ ಮಾಡಿಸಲಿ. ಪಾಕಿಸ್ತಾನ ನಮ್ಮ ಶತ್ರು ದೇಶ. ನೀವು ಹಾಗೆ ತಿಳಿದಿದ್ದರೆ ಪಂದ್ಯ ನಿಲ್ಲಿಸಬೇಕು. ನಾನು ಮ್ಯಾಚ್ ನೋಡೋದಿಲ್ಲ. ಈಗ್ಲೂ ಸರ್ಕಾರ ಮನಸ್ಸು ಮಾಡಿದರೆ ಕ್ಯಾನ್ಸಲ್ ಮಾಡಿಸಬಹುದು. ಪಹಲ್ಗಾಮ್‌ನಲ್ಲಿ ಹೆಣ್ಣು ಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ. ಅವರ ಕುಟುಂಬಕ್ಕೆ ಗೌರವ ಬೇಡ್ವಾʼಎಂದು ಕೇಂದ್ರ ಸರ್ಕಾರದ ವಿರುದ್ಧ ಪ್ರದೀಪ್ ಈಶ್ವರ್ ಗುಡುಗಿದರು.
ಇನ್ನು ಮದ್ದೂರಿನಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಅವ್ರೆ ಬಾಯಿಬಡ್ಕೊಳೋದಲ್ಲ. ನಿಮ್ಮ ಹೈಕಮಾಂಡ್‌ಗೆ ಕರೆ ಮಾಡಿ ಮ್ಯಾಚ್ ಕ್ಯಾನ್ಸಲ್ ಮಾಡಿಸೋಕೆ ಹೇಳಿ. ಇವ್ರದೆಲ್ಲ ಹೊರಗೊಂದು ಒಳಗೊಂದು. ನಾನು ಕಾಂಗ್ರೆಸ್ ಶಾಸಕನಾಗಿ ನಾನು ಹೇಳ್ತಿದ್ದೇನೆ ಮ್ಯಾಚ್‌ನ ಕ್ಯಾನ್ಸಲ್ ಮಾಡ್ಸೋಕೆ ಧಮ್ ಇದ್ರೆ ಪಂದ್ಯ ಕ್ಯಾನ್ಸಲ್ ಮಾಡಿಸಲಿ. ರಾಜ್ಯ ಬಿಜೆಪಿ ನಾಯಕರಿಗೆ ನಾನು ಸವಾಲ್ ಹಾಕುತ್ತಿದ್ದೇನೆ. ಪಹಲ್ಗಾಮ್‌ನಲ್ಲಿ ಏನಾಯ್ತು ಗೊತ್ತಿದೆ. ಹೀಗಾಗಿ ಪಂದ್ಯ ಕ್ಯಾನ್ಸಲ್ ಮಾಡಬೇಕುʼ ಎಂದು ಪ್ರದೀಪ್ ಈಶ್ವರ್ ಹೇಳಿದರು.


