ರಾಜ್ಯ

ಶಾಸಕರು ಭೂಮಿ ಪೂಜೆ ಮಾಡುವಾಗ ಗಲಾಟೆ..!

ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಶಾಸಕ ಚಂದ್ರು ಲಮಾಣಿ ಭೂಮಿ ಪೂಜೆ ಮಾಡುವ ವೇಳೆ ಒಂದಿಷ್ಟು ಗದ್ದಲ ಉಂಟಾಯ್ತು.. ಲಕ್ಷ್ಮೇಶ್ವರ ಪಟ್ಟಣದ ಭಾನು ಮಾರ್ಕೆಟ್ ಯಿಂದ ದರ್ಗಾದವರೆಗೆ 2 ಕೋಟಿ ವೆಚ್ಚದಡಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಚಂದ್ರು ಲಮಾಣಿ ಚಾಲನೆ ನೀಡಿದ್ರು.. ಈ ವೇಳೆ ಶಾಸಕರ ಬಳಿ ಬಂದ ಕೆಲವರು, ಕೆಲಸ ನಡೆಯುವ ಸ್ಥಳದಲ್ಲಿ ಕೆಲವರು ಅಡಚಣೆ ಮಾಡ್ತಿದ್ದಾರೆ.. ಕ್ರಮ ತಗೊಳಿ ಎಂದು ಮನವಿ ಮಾಡಿದ್ರು. ಈ ಸಂದರ್ಭದಲ್ಲಿ ಮಾತಾಡಿದ ಶಾಸಕರು, ನಾವು ಕಷ್ಟಪಟ್ಟು ಅನುದಾನ ತರುತ್ತೇವೆ.. ಆದರೆ ಕೆಲವರು ಕೆಲಸಗಳಿಗೆ ಅಡ್ಡಿ ಪಡಿಸುತ್ತಾರೆ. ಮಣ್ಣು ಕಳಪೆ ಆಗಿದೆ, ಸಿಮೆಂಟ್ ಸರಿಯಿಲ್ಲ ಎಂದು ಸುಳ್ಳು ಆರೋಪ ಮಾಡಿ ಕೆಲಸ ನಿಲ್ಲಿಸುವಂತೆ ದಾಂಧಲೆ ಮಾಡುತ್ತಾರೆ ಎಂದು ಆಕ್ರೋಶ ಹೊರಹಾಕಿದ್ರು.. ಹೀಗಾದರೆ ಅಭಿವೃದ್ಧಿ ಕೆಲಸಗಳು ಕುಂಠಿತವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ರು.

Comments (0)

Your email address will not be published. Required fields are marked *

Back to top button