ಜಿಲ್ಲೆರಾಜಕೀಯಸುದ್ದಿ

ಪ್ರಿಯಾಂಕ್ ಖರ್ಗೆ ವಿರುದ್ಧ ಅಲ್ಲಮಪ್ರಭು ಪಾಟೀಲ್ ಬೇಸರ..!

ಕಲಬುರಗಿ : ಕಲ್ಯಾಣ ಕರ್ನಾಟಕ ಕಾಂಗ್ರೆಸ್​ನಲ್ಲಿ ಎಲ್ಲವೂ ಸರಿ ಇದ್ದಂತೆ ಇಲ್ಲ. ಮತ್ತೊಬ್ಬ ಕೈ ಶಾಸಕ ಸಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸುವ ವೇಳೆ ಬಿ.ಆರ್. ಪಾಟೀಲ್ ಅವರ ಜೊತೆಗೆ ಇದ್ದ ಅಲ್ಲಮಪ್ರಭು ಪಾಟೀಲ್, ಲ್ಯಾಂಡ್ ಆರ್ಮಿ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಯೋಜನೆ ಗೊತ್ತಿರುತ್ತೆ.. ಆದ್ರೆ ನಮಗೆ ಕೇಳದೆ ಕಾಮಗಾರಿ ಪ್ರಾರಂಭ ಮಾಡುತ್ತಾರೆ.. ಪೂಜೆ ಮಾಡದೆ ಕಾಮಗಾರಿ ಆರಂಭ ಮಾಡುತ್ತಾರೆ ಎಂದು ಬೇಸರ ಹೊರಹಾಕಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಅವರ ಗಮನಕ್ಕೆ ಬರುತ್ತೆ ಎನ್ನುವ ಮೂಲಕ ಕುತೂಹಲ ಮೂಡಿಸಿದ್ದಾರೆ.ಅಲ್ಲಮಪ್ರಭು ಪಾಟೀಲ್ ಅವರ ಈ ಮಾತುಗಳು ಪರೋಕ್ಷವಾಗಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಕಾರ್ಯವೈಖರಿ ಬಗ್ಗೆ ಅಸಮಧಾನ ಇದೆ ಎಂಬುದನ್ನು ತೋರಿಸುವಂತೆ ಇದ್ದಿದ್ದು ಸುಳ್ಳಲ್ಲ.

Comments (0)

Your email address will not be published. Required fields are marked *

Back to top button