ರಾಜಕೀಯರಾಜ್ಯ

ಮೆಟ್ರೋ ನಿಲ್ದಾಣಕ್ಕೂ ಅಮುಲ್ ಲಗ್ಗೆ.. ನಂದಿನಿ ಬ್ರ್ಯಾಂಡ್​​ಗೆ ಅನ್ಯಾಯ..!

ಬೆಂಗಳೂರಿನ ನಮ್ಮ ಮೆಟ್ರೋ‌ ನಿಲ್ದಾಣಗಳಲ್ಲಿ‌ ಅಮುಲ್‌ ಮಳಿಗೆಗಳನ್ನ ತೆರೆಯಲು ಅವಕಾಶ ನೀಡಲಾಗಿದೆ. 10 ಪ್ರಮುಖ ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಕಿಯೋಸ್ಕ್ ಮಳಿಗೆ ಸ್ಥಾಪಿಸಲು ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟದೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ BMRCL ತಿಳಿಸಿದೆ. ಇದಕ್ಕೆ ಭಾರಿ ವಿರೋಧ ವ್ಯಕ್ತವಾಗ್ತಿದೆ.

ಪ್ರಾಯೋಗಿಕವಾಗಿ 10 ಮೆಟ್ರೋ ಸ್ಟೇಷನ್ ಗಳಲ್ಲಿ ಅಮೂಲ್ ಮಳಿಗೆಗಳನ್ನ ತೆರೆಯಲಾಗಿದೆ. ಪಟ್ಟಂದೂರು ಅಗ್ರಹಾರ, ಇಂದಿರಾನಗರ, ಬೈಯಪ್ಪನಹಳ್ಳಿ, ಟ್ರಿನಿಟಿ, ಜಯನಗರ ಸೇರಿ 10 ಮೆಟ್ರೋ ನಿಲ್ದಾಣದಲ್ಲಿ ಅಮುಲ್ ಮಳಿಗೆ ತೆರೆದಿದೆ. ಗುಜರಾತ್ ಮೂಲದ ಕಂಪನಿಗೆ ಅವಕಾಶ ನೀಡಿರೋದಕ್ಕೆ ಸಾರ್ವಜನಿಕರು ಆಕ್ರೋಶ ಹೊರಹಾಕ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ಮೆಟ್ರೋ‌ ನಿಲ್ದಾಣದಲ್ಲಿ ಅಮೂಲ್ ಮಳಿಗೆಗೆ ಅವಕಾಶ ನೀಡಲಾಗಿದೆ. ಆದ್ರೆ ಕೆಎಂಎಫ್‌ ಅವರು ಎಲ್ಲೂ ಟೆಂಡರ್‌ಗೆ ಅರ್ಜಿ ಹಾಕಿಲ್ಲ ಎಂದಿದ್ದಾರೆ. ಆದರೂ 8 ಕಡೆ ಅರ್ಜಿ ಹಾಕಿ, ಓಪನ್ ಮಾಡಿಕೊಳ್ಳಿ ಅಂತ ಹೇಳಿದ್ದೇನೆ. ಎರಡು ಮಳಿಗೆಗಳನ್ನು ಅಮೂಲ್‌ ನವ್ರು ಓಪನ್ ಮಾಡಿದ್ದಾರೆ. ಈಗ ಮುಚ್ಚಿಸೋಕೆ ಆಗಲ್ಲ ಎಂದು ಡಿಸಿಎಂ ತಿಳಿಸಿದ್ದಾರೆ.

ಈ ಸಂಬಂಧ ನಮ್ಮ ಮೆಟ್ರೋ ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ್ ರಾವ್ ಹಾಗೂ KMF ಎಂಡಿ ಶಿವಸ್ವಾಮಿ ಸಭೆ ನಡೆಸಿ ಮಾತುಕತೆ ನಡೆಸಿದ್ದಾರೆ.

Comments (0)

Your email address will not be published. Required fields are marked *

Back to top button