ರಾಜ್ಯ

ಮಲಗಿದ್ದ ಅಧಿಕಾರಿಗಳಿಗೆ ಲೋಕಾಯುಕ್ತ ರೇಡ್ ಬಿಸಿ

ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಭ್ರಷ್ಟ ಅಧಿಕಾರಿಗಳ ಚಳಿ ಬಿಡಿಸಿದ್ದಾರೆ.
ಬೆಂಗಳೂರು, ತುಮಕೂರು, ಮಂಗಳೂರು, ವಿಜಯಪುರ, ಯಾದಗಿರಿ, ಕಲಬುರ್ಗಿ ಸೇರಿದಂತೆ ರಾಜ್ಯದ ವಿವಿಧೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಯಾವೆಲ್ಲಾ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ?

1. ತುಮಕೂರು, ರಾಜಶೇಖರ್, ಯೋಜನಾ ನಿರ್ದೇಶಕರು, ನಿರ್ಮಿತಿ ಕೇಂದ್ರ
2. ಮಂಗಳೂರು: ಮಂಜುನಾಥ್, ಸರ್ವೆ ಮೇಲ್ವಿಚಾರಕರು, ದಕ್ಷಿಣ ಕನ್ನಡ
3. ವಿಜಯಪುರ : ಶ್ರೀಮತಿ ರೇಣುಕಾ. ಸಾತರ್ಲೆ, ಡಾ.ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ
4. ಬೆಂಗಳೂರು ನಗರ : ಮುರಳಿ ಟಿ.ವಿ, ಹೆಚ್ಚುವರಿ ನಿರ್ದೇಶಕರು, ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶನಾಲಯ
5. ಬೆಂಗಳೂರು: ಎಚ್ ಆರ್ ನಟರಾಜ್, ಇನ್ಸ್‌ಪೆಕ್ಟರ್, ಕಾನೂನು ಮಾಪನಶಾಸ್ತ್ರ
6. ಬೆಂಗಳೂರು ಗ್ರಾಮಾಂತರ, ಅನಂತ್ ಕುಮಾರ್ SDA, ಹೊಸಕೋಟೆ ತಾಲೂಕು ಕಛೇರಿ
7. ಯಾದಗಿರಿ: ಉಮಾಕಾಂತ್, ಶಹಾಪುರ ತಾಲೂಕು, ಯಾದಗಿರಿ

ಎಸ್‌ಡಿಎ ಅಧಿಕಾರಿ ಅನಂತ್‌ ಪ್ರವರ

ಎಸ್ಪಿ ನೇತೃತ್ವದ 8 ಜನರ ತಂಡ ಎಸ್​ಡಿಎ ಅಧಿಕಾರಿ ಅನಂತ್ ಮನೆ ಮೇಲೆ ದಾಳಿ ನಡೆಸಿದೆ.ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನ ಭೋಧನ ಹೋಸಹಳ್ಳಿ ಗ್ರಾಮದ ಮನೆಯಲ್ಲಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಹೊಸಕೋಟೆ ತಾಲೂಕು ಕಚೇರಿಯ ಭೂ‌ ಮಂಜೂರಾತಿ ಸೆಕ್ಷನ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅನಂತ್ ವಿರುದ್ಧ ಆದಾಯಕ್ಕಿಂತ ಹೆಚ್ಚು ಆಸ್ತಿ‌ಹೊಂದಿರೋ ಆರೋಪವಿದೆ

 ಸರ್ವೆ ಇಲಾಖೆ ಅಧಿಕಾರಿ ಮಂಜುನಾಥ್‌ ಪುರಾಣ

ಮಂಗಳೂರಿನ ಸರ್ವೆ ಅಧಿಕಾರಿ ಮಂಜುನಾಥ್ ಮನೆ ಮೇಲೆ‌ ಲೋಕಾಯುಕ್ತ ದಾಳಿ ನಡೆದಿದೆ. ಮಂಗಳೂರಿನ ಬಿಜೈ ನ 8ನೇ ಕ್ರಾಸ್ ನಲ್ಲಿರುವ ಮಂಜುನಾಥ್ ಮನೆ ಮೇಲೆ ಮೂರು ಕಾರುಗಳಲ್ಲಿ ಬಂದ ಲೋಕಾಯುಕ್ತ ಟೀಂ ರೇಡ್ ಮಾಡಿದೆ. ತುಮಕೂರು ಮೂಲದ ಮಂಜುನಾಥ್​​ ಸದ್ಯ ಸರ್ವೆ ಇಲಾಖೆಯಲ್ಲಿ ಮೇಲ್ವಿಚಾರಕರಾಗಿ ಕರ್ತವ್ಯ ನಿರ್ವಹಿಸ್ತಿದ್ದಾರೆ.

ವಿಜಯಪುರದಲ್ಲಿ ರೇಣುಕಾ ಮನೆ ಮೇಲೆ ಲೋಕಾ ದಾಳಿ!

ಡಾ.ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ರೇಣುಕಾ ಸಾತಾರ್ಲೆ ಅವರ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ವಿಜಯಪುರ ‌ನಗರದ ಸೆಂಟ್ ಜೋಸೆಫ್ ಶಾಲೆಯ ಹಿಂಭಾಗದ ಮನೆಯಲ್ಲಿ ಶೋಧ ಕಾರ್ಯ ನಡೆದಿದೆ. ಅಕ್ರಮ ಅಸ್ತಿ ಸಂಪಾದನೆ ಆರೋಪದ ಮೇಲೆ ಈ ದಾಳಿ ನಡೆದಿದೆ.

ಶಹಾಪೂರ ತಹಶೀಲ್ದಾರ ಉಮಾಕಾಂತ್ ಕಚೇರಿ ಮೇಲೆ ಲೋಕಾಯುಕ್ತ ದಾಳಿ

ಯಾದಗಿರಿಯ ಶಹಾಪೂರ ತಹಶೀಲ್ದಾರ ಉಮಾಕಾಂತ್ ಹಳ್ಳೆಯ ಕಚೇರಿ ಹಾಗೂ ಕಲಬುರಗಿಯ ನಿವಾಸದ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಮೇಲೆ ದಾಳಿ ನಡೆದಿದೆ.

ತುಮಕೂರು ನಿರ್ಮಿತಿ ಕೇಂದ್ರದ ಎಮ್​.ಡಿ ರಾಜಶೇಖರ ಮನೆ ಮೇಲೆ ದಾಳಿ!

ತುಮಕೂರು ನಿರ್ಮಿತಿ ಕೇಂದ್ರದ ಎಮ್​.ಡಿ ರಾಜಶೇಖರ್ ಅವರಿಗೆ ಸೇರಿದ ತುಮಕೂರಿನ ಸಪ್ತಗಿರಿ ಬಡಾವಣೆಯಲ್ಲಿರುವ ಮನೆ, ಎಸ್ ಎಸ್ ಪುರಂನಲ್ಲಿರುವ ಮನೆ, ಸಹೋದರ ರಾಜಶೇಖರ ಮನೆ ಮೇಲೆ ಲೋಕಾಯುಕ್ತ ರೇಡ್ ನಡೆದಿದೆ.

Comments (0)

Your email address will not be published. Required fields are marked *

Back to top button